ಅಂಕೋಲಾ : ತಾಲೂಕಿನ ಶಿರೂರು ಗ್ರಾಮಕ್ಕೆ ಕೇಂದ್ರ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್ ಡಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.

ಜುಲೈ 16ರಂದು ಶಿರೂರು ಬಳಿ ಹೆದ್ದಾರಿ ಪಕ್ಕದ ಗುಡ್ಡ ಕುಸಿದು ಹೆದ್ದಾರಿ ಮತ್ತು ನದಿಯಲ್ಲಿ ಬಿದ್ದಿತ್ತು. ಪರಿಣಾಮ ಏಳು ಜನರು ಪ್ರಾಣ ಕಳೆದುಕೊಂಡಿದ್ದರು. ಇನ್ನೂ ಹಲವರು ಸಾವನ್ನಪ್ಪಿರುವ ಶಂಕೆ ಇದೆ.

ದುರ್ಘಟನಾ ಪ್ರದೇಶಕ್ಕೆ ಸಚಿವ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.