ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೈದ್ರಾಬಾದ್(Hyderbad) : ನಡೆದುಕೊಂಡು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ ಘಟನೆ ತೆಲಂಗಾಣದ(Telangana) ಕಾಮರೆಡ್ಡಿ (Kamareddi) ಜಿಲ್ಲೆಯಲ್ಲಿ ನಡೆದಿದೆ.
10ನೇ ತರಗತಿಯ ಶ್ರೀನಿಧಿ(16) ಸಾವನ್ನಪ್ಪಿದ ದುರ್ದೈವಿ. ಮೃತೆ ಸಿಂಗರಾಯಪಲ್ಲಿ ಗ್ರಾಮದವಳು. ನಿನ್ನೆ ಗುರುವಾರ ಬೆಳಿಗ್ಗೆ ರಾಮರೆಡ್ಡಿ ಮಂಡಲದ ಶಾಲೆಯ ಬಳಿ ಎದೆನೋವು(Cheast Pain) ಕಾಣಿಸಿಕೊಂಡು ಕುಸಿದು ಬಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳಿಂದ ಮಕ್ಕಳು ಹೃದಯಘಾತದಿಂದ ಸಾವನ್ನಪ್ಪುತ್ತಿರುವುದು ಪಾಲಕರ ಆತಂಕ ಹೆಚ್ಚು ಮಾಡಿದೆ.
ಇದನ್ನು ಓದಿ : ಖೈದಿಗಳಿಗೂ ಗಂಗಾಜಲ ಸ್ನಾನ. ಯುಪಿ ಸಿಎಂ ಯೋಗಿ ಸರ್ಕಾರದಿಂದ ವ್ಯವಸ್ಧೆ.
	
						
							
			
			
			
			
