ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ (Ankola): ಹೆಸ್ಕಾಂನ ದಿವ್ಯ ನಿರ್ಲಕ್ಷ್ಯದಿಂದಾಗಿ(Hescom Negligency) ಯುವಕನೋರ್ವ ಮತ್ತು ಜಾನುವಾರೊಂದು ಸಾವನ್ನಪ್ಪಿದ ಘಟನೆ ತಾಲೂಕಿನ ಅವರ್ಸಾ ಗ್ರಾಮದ(Aversa Village) ದಂಡೆಭಾಗದಲ್ಲಿ ನಡೆದಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ  ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಹಾಂತೇಶ್ ಬಾನಾವಳಿಕರ್ (28) ಮೃತ ಯುವಕ. ಅಂಗಡಿಗೆ ಬಂದು ಮನೆಗೆ ವಾಪಾಸ್ ನಡೆದುಕೊಂಡು ಹೋಗುತ್ತಿದ್ದಾಗ ಓಣಿಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ(Electricity Wire) ತಗುಲಿ ದುರ್ಘಟನೆ ಸಂಭವಿಸಿದೆ.

ನಿನ್ನೆಯಷ್ಟೇ ಮಹಾಂತೇಶ್ ಮಹಾರಾಷ್ಟ್ರದಿಂದ ಅವರ್ಸಾಕ್ಕೆ(Maharashtra to Aversa) ಬಂದಿದ್ದ. ಅಂಗಡಿಯಲ್ಲಿ ಸಾಮಾನು ತರಲು ಹೋದಾಗ ಸಾವನ್ನಪ್ಪಿದ್ದಾನೆ. ಘಟನೆಯಿಂದ ಸ್ಥಳೀಯರು ಹೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಳಿ ಹೆಚ್ಚಾಗಿದ್ದರಿಂದ ಯಾವ ಕ್ಷಣದಲ್ಲಿ ವಿದ್ಯುತ್ ತಂತಿ ಹರಿದು ಕೆಳಕ್ಕೆ ಬೀಳುತ್ತೋ ಗೊತ್ತಿಲ್ಲ. ನಾಗರಿಕರು ಎಚ್ಚರದಿಂದ ಓಡಾಡಬೇಕಾಗಿದೆ.

ಇದನ್ನು ಓದಿ : ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಸಾವು. ಕೇರಳ ಮೂಲದ ಪ್ರೊಫೆಸರ್ ಆರೆಸ್ಟ್.

ಶಿರಸಿಯಲ್ಲಿ ಲೋಕಾಯುಕ್ತ ಕಾರ್ಯಾಚರಣೆ. ಬಲೆಗೆ ಬಿದ್ದ ಅಧಿಕಾರಿ.

ಜಗಳ ನಡಿತಿದೆ ಬಂಗಾರ ಹುಷಾರು ಎಂದು ಮಹಿಳೆ ಯಾಮಾರಿಸಿದ ಕಳ್ಳ ಅಂದರ್.