ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಮನೆಯಲ್ಲಿ ಯಾರು ಇಲ್ಲದ ವೇಳೆ  ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ಕದ್ದು (Theft) ಪರಾರಿಯಾದ ಘಟನೆ ಭಟ್ಕಳ ತಾಲೂಕಿನ(Bhatkal Taluku) ಶಿರಾಲಿಯ ಗುಮ್ಮನಹಕ್ಲುವಿನಲ್ಲಿ ನಡೆದಿದೆ.

ಮಂಜುನಾಥ ಮಾಸ್ತಪ್ಪ ನಾಯ್ಕ ಎಂಬುವರಿಗೆ ಸೇರಿದ ಮನೆ ಕಳ್ಳತನವಾಗಿದ್ದು  ಇವರ ಪತ್ನಿ ಕಳೆದ 20 ದಿನಗಳ ಹಿಂದೆ  ಬಾಣಂತನಕ್ಕಾಗಿ ಮುರ್ಡೇಶ್ವರದ (Murudeshwar) ತಾಯಿಯ ಮನೆಯಲ್ಲಿ ಇದ್ದರು. ಪತಿ ಮಂಜುನಾಥ ನಾಯ್ಕ ಮನೆಯಲ್ಲಿಯೇ ಇರುತ್ತಿದ್ದರು. ಆದರೆ, ಅವರು ಜೂನ್‌ 23ರ ಸೋಮವಾರ ರಾತ್ರಿ ಮುರ್ಡೇಶ್ವರದಲ್ಲಿರುವ (Murdeshwar) ತನ್ನ ಹೆಂಡತಿಯ ಮನೆಗೆ ಹೋಗಿದ್ದರು. ಅದೇ ದಿನ ರಾತ್ರಿ  ಅವಧಿಯಲ್ಲಿ ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ್ದಾರೆ. ಮನೆಯ ಬೆಡ್ ರೂಮ್ ಕೋಣೆಯ ಕಪಾಟಿನ ಬಾಗಿಲನ್ನು ಮುರಿದು ಕಪಾಟಿನಲ್ಲಿದ್ದ ಇದ್ದ ಒಟ್ಟು 466 ಗ್ರಾಂ ಬಂಗಾರದ ಆಭರಣಗಳು (Gold Ornaments) ಹಾಗೂ ಒಟ್ಟೂ 15 ಗ್ರಾಂ ಬೆಳ್ಳಿಯ ಆಭರಣಗಳು(Silver Ornaments) ಮತ್ತು ಎರಡುವರೆ ಲಕ್ಷ ರೂ ನಗದು ಕಳ್ಳತನ (Theft) ಮಾಡಿದ್ದಾರೆ.

ಘಟನೆಯಲ್ಲಿ 20,71,500 ರೂ. ಮೌಲ್ಯದ ವಸ್ತುಗಳು ಕಳ್ಳತನ ಆದ ಬಗ್ಗೆ ಮಂಜುನಾಥ ಮಾಸ್ತಪ್ಪ ನಾಯ್ಕ ದೂರು ಭಟ್ಕಳ ಗ್ರಾಮೀಣ ಠಾಣೆಯಲ್ಲಿ (Bhatkal Rural Station) ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಜೂನ್ 25ರಂದು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ.

ಶಾಲಾ ವಿದ್ಯಾರ್ಥಿ ಅಪಘಾತದಲ್ಲಿ ದುರ್ಮರಣ. ಬಿಕ್ಕಿಬಿಕ್ಕಿ ಅತ್ತ ಶಿಕ್ಷಕರು.