ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಬೆಲೇಕೇರಿ ಅದಿರು(Belekeri ore) ಕಳ್ಳತನ ಪ್ರಕರಣ ಎದುರಿಸಿದ್ದ ಕಾರವಾರ ಶಾಸಕ ಸತೀಶ ಸೈಲ್(Satish Sail) ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ನಾಲ್ಕು ಗಂಟೆವರೆಗೆ ತಮ್ಮ ತಪಾಸಣೆ ಮುಂದುವರಿಸಿದ್ದರು
ಗೋವಾ(Goa) ಮತ್ತು ಕರ್ನಾಟಕದ(Karnataka) ಇಡಿ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆ ವರೆಗೂ ಮನೆಯಲ್ಲಿ ತಪಾಸಣೆ ಮುಂದುವರಿಸಿದ್ದು ಮನೆಯ ಎರಡು ಕೋಣೆಯಲ್ಲಿದ್ದ ನಗದು ಮತ್ತು ಬಂಗಾರವನ್ನ ಜಪ್ತಿ ಮಾಡಿರುವ ಸಾಧ್ಯತೆ ಇದೆ.
ಬೆಳಿಗ್ಗೆಯಿಂದಲೇ ಇಂಚಿಂಚಾಗಿ ಮನೆಯನ್ನ ಜಾಲಾಡಿದ ಇಡಿ ಅಧಿಕಾರಿಗಳಿಗೆ ಎರಡು ಕೋಣೆಯ ಬಾಗಿಲು ಬಂದ್ ಇರೋದು ಗೊತ್ತಾಯಿತು. ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್(Satish Sail) ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದಾಗಲೂ ಸಾಧ್ಯವಾಗಿಲ್ಲ. ಹೀಗಾಗಿ ಮನೆಯಲ್ಲಿದ್ದ ಸಹಾಯಕ ಮತ್ತು ಹಿರಿಯರ ಎದುರೇ ಅಧಿಕಾರಿಗಳು ಬಾಗಿಲು ತೆಗೆದರು.
ಈ ವೇಳೆ ಕಾರವಾರದ ಬ್ಯಾಂಕ್ ಒಂದರ ಅಧಿಕಾರಿಗಳನ್ನು ರಾತ್ರಿ ಕರೆಸಿ ಖಾತೆಗಳನ್ನ ಪರಿಶೀಲಿಸಿದರು. ನಗದಿನ ಪರಿಶೀಲನೆ ಮಾಡಿಸಿದ್ದಾರೆ. ಬಳಿಕ ಎರಡು ಟ್ರಂಕ್ ವಸ್ತುಗಳನ್ನು ಬ್ಯಾಂಕ್ ಗೆ ಕೊಂಡೊಯ್ದರು. ಮಧ್ಯೆ ರಾತ್ರಿವರೆಗೂ ಸಹ ಸೈಲ್ ಅವರ ಮನೆಯಲ್ಲಿ ತಪಾಸಣೆ ಮುಂದುವರಿಯಿತು. ಬಳಿಕ ಇಡಿ ಅಧಿಕಾರಿಗಳು ಮನೆಯಿಂದ ತೆರಳಿದ್ದಾರೆಂದು ತಿಳಿದುಬಂದಿದೆ.
ಇದನ್ನು ಓದಿ : ಬೆಲೆಕೇರಿ ಅದಿರು ಪ್ರಕರಣ. ಗೋವಾ ಮತ್ತು ಬೆಂಗಳೂರು ಇಡಿ ಅಧಿಕಾರಿಗಳಿಂದ ಶಾಸಕ ಸತೀಶ ಸೈಲ್ ಮನೆ ಮೇಲೆ ದಾಳಿ.
ಭಟ್ಕಳಕ್ಕೆ ಗಾಂಜಾ ಸಾಗಾಟ. ಪೊಲೀಸರ ದಾಳಿ. ಓರ್ವನ ಬಂಧನ. ಮತ್ತೋರ್ವ ಪರಾರಿ.