ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ(Goa) : ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ (Sachin Tendulkar) ಗೋವಾದ ಮೀನುಗಾರನೋರ್ವನ ಲಕ್ ಬದಲಿಸಿದ್ದಾರೆ. ಇದೀಗ ಆತ ತಾನು ಶ್ರೀಮಂತನಾಗಿರುವ ಕಥೆಯನ್ನ ಬಿಚ್ಚಿಡುತ್ತಿದ್ದಾನೆ.
ಗೋವಾದ ಬಾಣಾವಲಿಯ ಮೀನುಗಾರ ಫ್ರಾನ್ಸಿಸ್ಕೊ ಫರ್ನಾಂಡಿಸ್(Fransisco Fernandis) ಎಂಬುವವರು ಪೆಲೆ ಫನಾಂಡೀಸ್ ಎಂದೆ ಪ್ರಸಿದ್ದಿ. ಇದೀಗ ಪ್ರಾನ್ಸಿಸ್ಕೋ ತಮ್ಮ ಮತ್ತು ತೆಂಡುಲ್ಕರ್ ಅವರ ಸಂಬಂಧವನ್ನ ಹೇಳಿದ್ದಾರೆ. ಖ್ಯಾತ ಕ್ರಿಕೇಟ್ ಆಟಗಾರ ಸಚಿನ್ ತೆಂಡುಲ್ಕರ್(Sachin Tendulkar) ರವರು ಗೋವಾದ ಬೀಚ್ ನಲ್ಲಿ ನನ್ನನ್ನು ಭೇಟಿಯಾಗಿದ್ದ ವೀಡಿಯೊವನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಾದ ನಂತರ ನಾನೇ ಒಬ್ಬ ಸೆಲೆಬ್ರಿಟಿಯಂತಾಗಿಬಿಟ್ಟಿದ್ದೇನೆ.
ನನ್ನನ್ನು ಭೇಟಿ ಮಾಡಲು ಸೆಲೆಬ್ರಿಟಿಗಳು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಸಚಿನ್ ಅವರು ಪೋಸ್ಟ್ ಹಾಕಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಕಾಲ್ ಬಂತು.ಅದರ ಬಳಿಕ ಎಲ್ಲವೂ ಬದಲಾಯಿತು. ನನ್ನ ಮನವಿಯನ್ನು ಸರ್ಕಾರ ತ್ವರಿತವಾಗಿ ಪೂರ್ಣಗೊಳಿಸಿತು. ಪ್ರವಾಸೋದ್ಯಮ ಸಚಿವ(Tourism Minister) ರೋಹನ್ ಖಂವಟೆ ರವರ ಬಳಿ ಮಾಡಿದ್ದ ಮನವಿಯನ್ನು ಕೇವಲ ಅರ್ಧ ಗಂಟೆಯಲ್ಲಿ ಪೂರ್ಣಗೊಳಿಸಿದರು ಎಂದು ಫನಾಂಡಿಸ್ ತಮ್ಮ ಸಂತಸದ ಅನುಭವ ಹಂಚಿಕೊಂಡಿದ್ದಾರೆ.
ಹಿಂದೊಮ್ಮೆ ಮೀನುಗಾರಿಕೆಯ ಅನುಭವ ಪಡೆಯಲು ಖ್ಯಾತ ಕ್ರಿಕೇಟಿಗ (Famous Cricketer) ಸಚಿನ್ ತೆಂಡುಲ್ಕರ್ ನನ್ನ ಬಳಿ ಬಂದಿದ್ದರು. ಆಗ ನಾನು ಸಚಿನ್ ರವರ ಪತ್ನಿಯ ಬಳಿ ನಿಮ್ಮ ಪತಿ ನನ್ನನ್ನು ಬಡವನನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದೆ. ಆಗ ಅವರು ಏಕೆ ಬಡವರಾಗುತ್ತಿದ್ದೀರಿ.? ಎಂದಿದ್ದರು. ಆಗ ನಾನು ಹೇಳಿದೆ, ನಿಮ್ಮ ಪತಿ ಶತಕ ಬಾರಿಸಿದಾಗ, ಅರ್ಧ ಶತಕ ಬಾರಿಸಿದಾಗ ನನ್ನ ಹಣವನ್ನು ಖರ್ಚು ಮಾಡಿ ಇಲ್ಲಿ ನಾನು ಪಟಾಕಿ ಹೊಡೆದಿದ್ದೇನೆ. ಇದರಿಂದ ನನ್ನ ಹಣ ಖರ್ಚಾಗಿ ನಾನು ಬಡವನಾಗುತ್ತಿದ್ದೇನೆ ಎಂದು ಹೇಳಿದ್ದೆ. ನಂತರ ಅವರು ನಾವು ಹಿಡಿದಿದ್ದ ಮೀನನ್ನು ಬೇಯಿಸಿ ತಿನ್ನಲು ನನ್ನನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿದ್ದರು. ಆಗ ಸಚಿನ್ ರವರು ನಾನು ಈಗ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ಇದು ಹೇಗೆ ಎಂದು ನನಗೆ ತಿಳಿಯಲಿಲ್ಲ. ಅವರು ನನ್ನೊಂದಿಗೆ ವೀಡಿಯೊ ಶೂಟ್ ಮಾಡಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.
ನಂತರ ಸೆಲೆಬ್ರಿಟಿಗಳು ನನ್ನನ್ನು ಭೇಟಿಯಾಗಲು ಬರಲಾರಂಭಿಸಿದರು. ಮೀನುಗಾರಿಕೆಗೆ ನನ್ನೊಂದಿಗೆ ಹೋಗಲು ಒಂದು ರೌಂಡ್ ಗೆ 10 ಸಾ.ರೂ ನಿಗದಿಪಡಿಸಿದ್ದೇನೆ. ಹೀಗಿದ್ದರೂ ನನ್ನೊಂದಿಗೆ ಮೀನುಗಾರಿಕೆಗೆ ತೆರಳಲು ಸಿಲೆಬ್ರೆಟಿಗಳು ಮುಗಿ ಬೀಳುತ್ತಾರೆಂದು ಫನಾಂಡಿಸ್ ತಾನು ಶ್ರೀಮಂತರಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಮೀನು ಮಾರುಕಟ್ಟೆ ಸ್ಥಳಾಂತರವಿಲ್ಲ. ಜನರ ಅನುಕೂಲಕ್ಕಾಗಿ ಮತ್ತೊಂದು ನಿರ್ಮಾಣ
ದೇವಾಲಯದ ಹುಂಡಿ ಕಳ್ಳತನ. ಭಟ್ಕಳ ಪೊಲೀಸರಿಂದ 12 ಗಂಟೆಯೊಳಗೆ ಆರೋಪಿಗಳ ಬಂಧನ.