ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಸುಪ್ರೀಂ ಕೋರ್ಟ್ ಆದೇಶದಿಂದ ಎರಡನೇ ಬಾರಿ ಜೈಲು ಸೇರಿದ ನಟ ದರ್ಶನ್ ಥಂಡಾ ಹೊಡೆದಿದ್ದಾರೆ. ಜೈಲಿನ ಕಟ್ಟುನಿಟ್ಟಿನ ನಿಯಮಗಳಿಂದ ಯಾವುದೇ ರಾಜಾತಿಥ್ಯ ಸಿಗದ ನಟ ದರ್ಶನ್ ಗೆ(Actor Darshan) ಪರಪ್ಪನ ಅಗ್ರಹಾರ(Parappana Agrahar) ಜೈಲಿನಲ್ಲಿ ಪರಿಸ್ಥಿತಿಯ ಅರಿವಾಗುತ್ತಿದೆ.
ಹೆಚ್ಚುವರಿ ದಿಂಬು, ಬೆಡ್ ಶೀಟ್, ಹಾಸಿಗೆಗಾಗಿ ಕೋರಿದ್ದ ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆದಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಯನ್ನು ಹಾಜರುಪಡಿಸಲಾಗಿದೆ. ಈ ವೇಳೆ ನ್ಯಾಯಾಧಿಶರು ಅರ್ಜಿ ವಿಚಾರಣೆ ಮುಂದೂಡಿದ್ದಾರೆ. ವಿಚಾರಣೆ ಮುಂದೂಡುತ್ತಿದ್ದಂತೆ ತಮ್ಮ ಕೈ ಎತ್ತಿದ ದರ್ಶನ್, ‘ನನ್ನದೊಂದು ಮನವಿಯಿದೆ ಸ್ವಾಮಿ ಎಂದಿದ್ದಾರೆ. ದಯವಿಟ್ಟು ನನಗೆ ಸ್ವಲ್ಪ ವಿಷ ಕೊಟ್ಟುಬಿಡಿ’ ಎಂದು ಕೇಳಿದ್ದಾರೆ.
ನನಗೊಬ್ಬನಿಗೆ ಸ್ವಲ್ಪ ವಿಷ ಕೊಟ್ಟು ಬಿಡಿ ಸಾಕು. ನಾನು ಬಿಸಿಲು ನೋಡದೇ 30 ದಿನಗಳು ಆಗಿವೆ. ಕೈಯೆಲ್ಲಾ ಫಂಗಸ್ ಬಂದಿದೆ’ ಎಂದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಜಡ್ಜ್ ನೀವು ಹೀಗೆಲ್ಲ ಕೇಳುವಂತಿಲ್ಲ. ನಿಮಗೆ ಏನು ಬೇಕು ಎಂದು ಮನವಿಯಷ್ಟೇ ಮಾಡಬಹುದು. ಅದರ ಬಗ್ಗೆ ನ್ಯಾಯಾಧೀಶರು ವಿಚಾರಣೆ ನಡೆಸಿ ಜೈಲಾಧಿಕಾರಿಗಳಿಗೆ ಸೂಚಿಸುತ್ತಾರೆ ಎಂದರು.
ಮಧ್ಯಾಹ್ನ ವಿಚಾರಣೆ ನಡೆಸಿದ ನ್ಯಾಯಾಲಯ ದರ್ಶನ್ ಮನವಿಯಂತೆ ಬೆಡ್ ಶೀಟ್, ಹಾಸಿಗೆ, ತಲೆದಿಂಬು ನೀಡಲು ಒಪ್ಪಿದೆ. ಅಲ್ಲದೇ ದರ್ಶನ್ ಗೆ ಜೈಲಿನಲ್ಲಿ ವಾಕ್ ಮಾಡಲು ಅವಕಾಶ ನೀಡಿದೆ. ವಾರದಲ್ಲಿ ಎರಡು ದಿನ ಕುಟುಂಬಕ್ಕೆ ಕರೆ ಮಾಡಲು ಅವಕಾಶವಿದೆ. ಜೈಲಿನ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಸದ್ಯಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಅಗತ್ಯವಿಲ್ಲ, ನಿಯಮ ಉಲ್ಲಂಘನೆ ಮಾಡಿದರೆ ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಇದನ್ನು ಓದಿ : ದೇವಾಲಯದಲ್ಲಿ ಕಳ್ಳರ ಕರಾಮತ್ತು. ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಕಳ್ಳತನ.
ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ಯಾರ ಕೈಚಳಕ . ಇನ್ನಾದರೂ ಡೋಸ್ ನೀಡುವರೇ ಅಧಿಕಾರಿಗಳು.