ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಾಸನ(Hasan) : ಗಣೇಶ ಮೆರವಣಿಗೆ ಹೋಗುವ ಸಂದರ್ಭದಲ್ಲಿ ವಾಹನವೊಂದು ನುಗ್ಗಿ ಬಾರೀ ದುರಂತ ಸಂಭವಿಸಿದ ಘಟನೆ ಹಾಸನ(Hasan) ತಾಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಸಂಭವಿಸಿದೆ
ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಕ್ಯಾಂಟರ್ ವಾಹನ ಹರಿದು ಈ ದುರಂತ ಸಂಭವಿಸಿದೆ. ದುರ್ಘಟಬೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಇಂದು ರಾತ್ರಿ ಅದ್ಧೂರಿಯಿಂದ ಗಣೇಶ ಮೆರವಣಿಗೆ (Ganesh Procession) ತೆರಳುತಿತ್ತು. ಈ ವೇಳೆ ಕ್ಯಾಂಟರ್ ವಾಹನವೊಂದು ಡಿವೈಡರ್ಗೆ ಡಿಕ್ಕಿ ಹೊಡೆದು ಇನ್ನೊಂದು ಬದಿಗೆ ಬಂದು ಜನರ ಮೇಲೆ ಹರಿದಿದೆ. ಪರಿಣಾಮವಾಗಿ ಮೆರವಣಿಗೆಯಲ್ಲಿದ್ದ ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ.. ಇನ್ನು ಹಲವರಿಗೆ ಗಂಬೀರ ಗಾಯವಾಗಿದೆ. 25ಕ್ಕೂ ಹೆಚ್ಚು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ವಲಯ ಎಂದು ಗೊತ್ತಿದ್ದರೂ ವಾಹನ ವೇಗವಾಗಿ ಬಂದಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : ಅವೈಜ್ಞಾನಿಕ ಡಂಪಿಂಗ್ ಯಾರ್ಡ್ ನಿಂದ ಮಕ್ಕಳಿಗೆ ಉಸಿರುಗಟ್ಟುವ ವಾತಾವರಣ.