ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) :  ರಾಮನಗರ-ಅನಮೋಡ್- ಗೋವಾ(Ramanagar-Anmod-Goa) ಮಾರ್ಗದ ತಿನೆಘಾಟ್(Tineghat) ಬಳಿ  ಬುಧವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ.

ರಾಮನಗರದಿಂದ ಗೋವಾ(Ramanagar to Goa) ತೆರಳುತ್ತಿದ್ದ ಖಾಸಗಿ ಬಸ್ ಎದುರಿಗೆ ಹೋಗುತ್ತಿದ್ದ ಟ್ರಕ್ ಒಂದನ್ನು ಓವರ್ ಟೇಕ್ ಮಾಡಲು ಹೋಗಿ ಮುಂಬದಿಯಿಂದ   ಬರುತ್ತಿದ್ದ ಟಾಟಾ ಯೋದ್ಧಾ ಪಿಕಪ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪಿಕಪ್ ವಾಹನದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ‌.

ಘಟನೆಯಿಂದ ಪಿಕಪ್ ಹಿಂದೆ ಬರುತ್ತಿದ್ದ ಬುಲೆಟ್ ಬೈಕಿಗೂ ಹಾನಿಯಾಗಿದ್ದು ಎಲ್ಲಾ ವಾಹನಗಳು ನಜ್ಜುಗುಜ್ಜಾಗಿವೆ. ಹಿಂದೆ ಇದ್ದ ಟ್ರಕ್ ಸಹ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗುವ ಸಂಭವವಿತ್ತು ಎನ್ನಲಾಗಿದೆ.  ಅಪಘಾತದಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ(Ramanagar Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಪೊಲೀಸ್ ಇಲಾಖೆಯಲ್ಲಿ ಆಯುಧ ಪೂಜೆ ಸಂಭೃಮ

ಕಾರವಾರದಿಂದ ಅಂಕೋಲಾಕ್ಕೆ ಸಾಗುವ ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಅಸ್ತು

ವಿಮಾನ ನಿಲ್ದಾಣದಲ್ಲಿ ದಾಂಡಿಯಾ, ಗಾರ್ಭ ನೃತ್ಯ ಮಾಡಿದ ಪ್ರಯಾಣಿಕರು, ಗಗನಸಖಿಯರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ. ಇಬ್ಬರು ಪಾರು.