ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಮೀನುಗಾರಿಕಾ ಯಾಂತ್ರಿಕ ದೋಣಿಯೊಂದು(Mechanized Boat) ಲಂಗರು ಹಾಕಿದ್ದ ಅಲೆಯ ಹೊಡೆತಕ್ಕೆ ಮುಳುಗಿದ ಘಟನೆ  ಬೇಲೇಕೇರಿ ಬಂದರಿನಲ್ಲಿ(Belekeri Port) ಸಂಭವಿಸಿದೆ.

ಸರಸ್ವತಿ ಅಶೋಕ ಬಾನಾವಳಿಕರ ಅವರಿಗೆ ಸೇರಿದ “ಶ್ರೀ ಶಾರದಾಂಬಾ” ಹೆಸರಿನ ಮೀನುಗಾರಿಕಾ ಪರ್ಸಿನ್ ಬೋಟ್ (Fishing Boat)  ಮುಳುಗಡೆ ಆಗಿದ್ದು  ಲಕ್ಷಾಂತರ ರೂ. ಹಾನಿಗೊಳಗಾಗಿದೆ ಎಂದು ಸ್ಥಳೀಯರು‌ ತಿಳಿಸಿದ್ದಾರೆ.

ಘಟನೆಯಲ್ಲಿ ಬೋಟಿನ ಯಂತ್ರೋಪಕರಣಗಳು, ಮೀನುಗಾರಿಕೆ ಬಲೆಗಳು(Fishing Net) ಮತ್ತು ಇತರ ಪರಿಕರಗಳು ‌ ಹಾನಿಗೊಳಗಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು(Police),  ಕರಾವಳಿ ಕಾವಲು ಪಡೆ(CSP) ಮತ್ತು ಮೀನುಗಾರಿಕೆ ಇಲಾಖೆಯ(Fisheries Department) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂದರಿನಲ್ಲಿ ಸೂಕ್ತ ಅ ಬ್ರೇಕ್ ವಾಟರ್(Break Water)  ಇಲ್ಲದ ಕಾರಣ ಇಂತಹ ದುರ್ಘಟನೆಗಳು ಪುನಃ ಪುನಃ ಸಂಭವಿಸುತ್ತಿವೆ. ಬಾರೀ ಅಲೆಗಳು ಬಂದರಿನಲ್ಲಿ ನಿಲ್ಲಿಸಿದ ಬೋಟ್ಗಳಿಗೂ ಅಪಾಯ ಉಂಟುಮಾಡುತ್ತಿರುವುದರಿಂದ ಶಾಶ್ವತವಾಗಿ   ಬ್ರೇಕ್ ವಾಟರ್(Break Water) ನಿರ್ಮಾಣ ಮಾಡುವಂತೆ ಸ್ಥಳೀಯರು‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಭಟ್ಕಳ ಮೂಲದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ. ದೌಡಾಯಿಸಿದ ಪೊಲೀಸರು.

ಸ್ನೇಹಿತರ ಜೊತೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದ ಯುವಕ *ವು.*

ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಕಾಂತಾರ 1. ಪ್ರಾದೇಶಿಕ ಸಿನೆಮಾ ಸಾರ್ವತ್ರಿಕವಾಗಿದ್ದಕ್ಕೆ ರಿಷಬ್ ಶೆಟ್ಟಿ ಹರ್ಷ.