ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಲಾರಿ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ-66 ರ ತೆಂಗಿನಗುಂಡಿ ಕ್ರಾಸ್(Tenginagundi Cross) ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಭೀಕರ ರಸ್ತೆ ಅಪಘಾತದಲ್ಲಿ ಪಿಯುಸಿ ವಿದ್ಯಾರ್ಥಿ ಅಸುನೀಗಿದ್ದಾನೆ. ಪಿರ್ದೋಸನಗರ(Firdous nagara) ನಿವಾಸಿ ಮಹ್ಮದ್ (18) ಮೃತ ಎಂದು ಗುರುತಿಸಲಾಗಿದೆ. ಈತತ ಅಲಿ ಪಬ್ಲಿಕ್ ಶಾಲೆಯ(Ali Public School) ದ್ವಿತೀಯ ಪಿಯುಸಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಕುಂದಾಪುರ ಕಡೆಯಿಂದ ಭಟ್ಕಳ(Kundapur to Karwar) ಕಡೆಗೆ ಅತಿವೇಗದಲ್ಲಿ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕೇರಳ ಮೂಲದ(Keral Native) ಲಾರಿ, ತೆಂಗಿನಗುಂಡಿ ಕ್ರಾಸ್ ಬಳಿ ಮುಂದೆ ಸಾಗುತ್ತಿದ್ದ ಸುಜುಕಿ ಬರ್ಗಮನ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸವಾರ ರಸ್ತೆ ಬದಿಗೆ ಬಿದ್ದಿದ್ದಾನೆ. ಬಳಿಕ ಲಾರಿಯ ಹಿಂಬದಿ ಚಕ್ರ ತಲೆ ಮೇಲೆ ಹಾದು ಹೋಗಿದೆ.
ಅಪಘಾತಕ್ಕೆ ಕಾರಣವಾದ ಲಾರಿಯನ್ನು ಕೇರಳ ಮೂಲದ ಅಭಿಲಾಶ್ ಕುಮಾರ (ತಂದೆ ಬಾಲಕೃಷ್ಣ ಪಿಲೈ) ಎಂಬಾತ ಚಲಾಯಿಸುತ್ತಿದ್ದ. ಈ ಸಂಬಂಧ ಮೃತನ ಸಂಬಂಧಿ ನವೀದ್ ಅಹ್ಮದ್ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಸಮುದ್ರದಲ್ಲಿ ಜೀವ ತೆಗೆಯವ ಮೀನುಗಳಿವೆ ಹುಷಾರ್.
ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ: ಅಪಪ್ರಚಾರ ನನ್ನ ಸ್ಫರ್ಧೆಯನ್ನು ಹತ್ತಿಕ್ಕುವ ಪ್ರಯತ್ನ: ಸರಸ್ವತಿ ಎನ್. ರವಿ