ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು(Manglore) : ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದ ವೃದ್ದರೊಬ್ಬರು ಅಂತ್ಯಸಂಸ್ಕಾರದ(Cremation) ಸಂದರ್ಭದಲ್ಲಿ ಜೀವಂತವಾದ ಪವಾಡಕರ(Miracle) ಘಟನೆ ನಡೆದಿದೆ.
ವೈದ್ಯಕೀಯ ಲೋಕದಲ್ಲಿ ವಿಸ್ಮಯವಾಗಿರುವ ಈ ವಿಚಿತ್ರ ಘಟನೆಗೆ ಕುಟುಂಬದವರು ಒಂದು ಕಡೆ ಶಾಕ್ ಗೆ ಒಳಗಾದರೇ ಇನ್ನೊಂದೆಡೆ ಸಂತಸಕ್ಕೂ ಕಾರಣವಾಗಿದೆ.
ಅಕ್ಟೋಬರ್ 19 ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರಘುನಾಥ ಗಟ್ಟಿ ದಾಖಲಾಗಿದ್ದರು. 69 ವರ್ಷದ ರಘುನಾಥ ಅವರು ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದ್ದರು. ಕುಟುಂಬಸ್ಥರು ಮರುದಿನ ಬೆಳಿಗ್ಗೆ ಮೃತದೇಹವನ್ನು ತೆಗೆದುಕೊಂಡು ಹೋಗುವುದಾಗಿ ತಿಳಿಸಿದ ಬಳಿಕ, ಆಸ್ಪತ್ರೆಯ ಸಿಬ್ಬಂದಿಗಳು ರಘುನಾಥ್ ಅವರ ದೇಹವನ್ನು ರಾತ್ರಿಯಿಡೀ ಶವಾಗಾರ (ಫ್ರೀಜರ್)ದಲ್ಲಿ ಇರಿಸಿದ್ದರು.
ಮರುದಿನ ಬೆಳಿಗ್ಗೆ, ಮೃತದೇಹವನ್ನು ಕುಂಬಳೆಯ ಕಂಚಿಕಟ್ಟೆಯಲ್ಲಿರುವ ಮನೆಗೆ ತೆಗೆದುಕೊಂಡು ಹೋಗಿದ್ದರು. ಸಂಬಂಧಿಕರು, ಕುಟುಂಬಸ್ಥರು ಸೇರಿ ಅಂತ್ಯಸಂಸ್ಕಾರದ ಎಲ್ಲ ಸಿದ್ಧತೆಗಳನ್ನು ಮುಗಿಸಿದ್ದರು. ಇನ್ನು ಅಂತಿಮ ವಿಧಿವಿಧಾನಗಳನ್ನು ಮುಗಿಸಿ, ದೇಹವನ್ನು ಚಿತೆಯ ಮೇಲೆ ಇರಿಸಬೇಕು ಎನ್ನುವಷ್ಟರಲ್ಲಿ ಸೇರಿದವರಿಗೆ ಅಚ್ಚರಿಯ ಘಟನೆ ಗೊತ್ತಾಗಿದೆ.
ಕಟ್ಟಿಗೆಯ ಮೇಲೆ ಮಲಗಿದ್ದ ರಘುನಾಥ ಗಟ್ಟಿ ಅವರು ತಮ್ಮ ತಲೆ ಮತ್ತು ಕಾಲುಗಳನ್ನು ನಿಧಾನವಾಗಿ ಅಲ್ಲಾಡಿಸಿದರು. ಶೋಕದಲ್ಲಿದ್ದ ಕುಟುಂಬದವರಿಗೆ ಶಾಕ್ ಆಯಿತು. ಈ ದೃಶ್ಯ ನೋಡಿ ಒಂದು ಕ್ಷಣ ದಿಗ್ಭ್ರಮೆಗೊಂಡರು. ಕೂಡಲೇ ರಘುನಾಥ ಗಟ್ಟಿ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ(Kasaragodu) ದಾಖಲಿಸಿದರು.
ಒಂದು ರಾತ್ರಿ ಫ್ರೀಜರ್‌ನಲ್ಲಿ ಇದ್ದ ವ್ಯಕ್ತಿ ‘ಸತ್ತು ಬದುಕಿದ’ ಘಟನೆ, ವೈದ್ಯಕೀಯ ಲೋಕದ ಅಚ್ಚರಿಗೆ ಕಾರಣವಾಗಿದೆ. ವೈದ್ಯರು ಯಾವ ಲೆಕ್ಕದಲ್ಲಿ ಸಾವು ಘೋಷಣೆ ಮಾಡಿದರು. ಮನುಷ್ಯ ದೇಹ ಅಷ್ಟೊಂದು ಸಮಯ ಫ್ರೀಜರ್‌ನಲ್ಲಿದ್ದರೂ ಹೇಗೆ ಬದುಕುಳಿಯಿತು ಎಂಬ ಕಾಡುತ್ತಿವೆ. ಏನೆ ಇರಲಿ ಕೆಲ ತಿಂಗಳ ಹಿಂದೆ ಹಾವೇರಿಯ ವ್ಯಕ್ತಿಯೋರ್ವ(Haveri Person) ತನ್ನ ಪ್ರೀತಿಯ ಡಾಬಾ ಬಂದಾಗ ಸತ್ತು ಬದುಕಿದ ಹಾಗೆ ಮಂಗಳೂರಿನಲ್ಲಿ ನಡೆದ ಅಂಥದೆ ಘಟನೆ ಅಚ್ಚರಿಗೆ ಕಾರಣವಾಗಿದೆ.
ಆದರೆ ಖಾಸಗಿ ಆಸ್ಪತ್ರೆಯ ಹೆಸರು ಕೆಡಿಸುವ ಉದ್ದೇಶದಿಂದ ವೈದ್ಯರ ಮೇಲೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ಸಂಬಂಧಿಕರು ಒತ್ತಾಯದ ಮೇಲೆ ರೋಗಿಯನ್ನ ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ನಾಳೆಯಿಂದ ಮೂರು ದಿನ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ.
ನಕಲಿ ಫೇಸ್ಬುಕ್ ಖಾತೆಯ ಮೂಲಕ ಸಚಿವ ಮಂಕಾಳ ವೈದ್ಯ ವಿರುದ್ದ ಅವಹೇಳನಕಾರಿ ಪೋಸ್ಟ್. ಓರ್ವ ಆರೆಸ್ಟ್.

