ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ(Karnataka Police Department) ಕಾನ್ಸ್ಟೇಬಲ್ಗಳು ಧರಿಸುತ್ತಿರುವ ಬ್ರಿಟಿಷ್(British) ಕಾಲದ ಟೋಪಿ ಬದಲಾವಣೆ ಮಾಡಲಾಗುತ್ತಿದೆ. ಸ್ಲೋಚ್ ಹ್ಯಾಟ್(Slouch Hat) ಬದಲಾಗಿ ಪೀಕ್ ಕ್ಯಾಪ್(Peaked Cap) ವಿತರಿಸಲು ರಾಜ್ಯ ಸರ್ಕಾರ(State Government) ನಿರ್ಧರಿಸಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅಕ್ಟೋಬರ್ 28ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiha), ಗೃಹ ಸಚಿವ ಡಾ ಜಿ ಪರಮೇಶ್ವರ(Home Minister G Parameshwar), ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DCM D K Shivakumar) ಕಾನ್ಸ್ಟೇಬಲ್ಗಳಿಗೆ ಪೀಕ್ ಕ್ಯಾಪ್(Peaked Cap) ವಿತರಿಸಲಿದ್ದಾರೆ.
ಬ್ರಿಟಿಷ್ ಕಾಲದ ಹಳೆ ಮಾದರಿಯ ಟೋಪಿ ಬದಲಿಸುವಂತೆ ಹಲವು ವರ್ಷಗಳಿಂದಲೂ ಬೇಡಿಕೆ ಇತ್ತು. ಸ್ಲೋಚ್ ಹ್ಯಾಟ್(Slouch Hat) ಬದಲಿಗೆ ಪೀಕ್ ಕ್ಯಾಪ್ ನೀಡುವುದರ ಕುರಿತು ರಚಿಸಲಾಗಿದ್ದ ಪೊಲೀಸ್ ಕಿಟ್(Police Kit) ನಿರ್ದಿಷ್ಟತಾ ಸಮಿತಿಯ ಸದಸ್ಯರು ಸಾಕಷ್ಟು ಬಾರಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾ ಬಂದಿದ್ದರು. ಇತ್ತೀಚಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದವು. ಮಹಾರಾಷ್ಟ್ರ(Maharashtra), ದೆಹಲಿ(Delhi), ಆಂಧ್ರಪ್ರದೇಶ(Andrapradesh), ತೆಲಂಗಾಣ(Telangana), ಕೇರಳ(Keral) ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಬಳಸುತ್ತಿರುವ ಕ್ಯಾಪ್ಗಳನ್ನು ಗೃಹ ಸಚಿವ ಪರಮೇಶ್ವರ ಪರಿಶೀಲಿಸಿದ್ದರು.
ಇತಿಹಾಸ ಸೇರಲಿರುವ ಪೊಲೀಸರ ಸ್ಲೋಚ್ ಕ್ಯಾಪ್ : ಕರ್ನಾಟಕ ರಾಜ್ಯ ಪೊಲೀಸ್ ಕ್ಯಾಪ್ಗಳಿಗೆ ಶತಮಾನದ ಇತಿಹಾಸವಿದೆ. ಮೈಸೂರು ಮಹಾರಾಜರ(Mysore Maharaj’s) ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ(State Police Department) ಖಾಕಿ ಅಂಗಿ, ಅರ್ಧ ಪ್ಯಾಂಟ್, ಬಣ್ಣದ ಪೇಟ ಮತ್ತು ಕಂದು ಬಣ್ಣದ ಬೂಟುಗಳನ್ನ ಧರಿಸಲಾಗುತ್ತಿತ್ತು. ರಾಜಪ್ರಭುತ್ವ ಅಂತ್ಯವಾದ ಬಳಿಕವೂ ಪೊಲೀಸರ ಸಾಂಪ್ರದಾಯಿಕ ಶೈಲಿಯ(Traditional Style) ಉಡುಗೆ ಉಳಿಸಿಕೊಂಡು ಬರಲಾಯಿತು. ನಂತರದ ದಿನಗಳಲ್ಲಿ ಅರ್ಧ ಪ್ಯಾಂಟ್ ಬದಲು ಪೂರ್ಣ ಪ್ರಮಾಣದ ಪ್ಯಾಂಟ್ ಹಾಗೂ ನೀಲಿ ಮತ್ತು ಕೆಂಪು ಬಣ್ಣಗಳುಳ್ಳ ಟರ್ಬನ್ ಮಾದರಿಯ ಟೋಪಿ(Tourbon Cap) ಪರಿಚಯಿಸಲಾಯಿತು. ಆರ್ ಗುಂಡೂರಾವ್(R Gundurao) ಅವರು 1980-83ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಕಾನ್ಸ್ಟೇಬಲ್ಗಳು ಪ್ರಸ್ತುತ ಬಳಸುತ್ತಿರುವ ಸ್ಲೋಚ್ ಕ್ಯಾಪ್ಗಳನ್ನು ನೀಲಿ ಬಣ್ಣದ ಕೆಂಪು ಪಟ್ಟಿಗಳಿದ್ದ ಟರ್ಬನ್ಗಳ ಬದಲಿಗೆ ಸ್ಲೋಚ್ ಕ್ಯಾಪ್ಗಳನ್ನ ದೈನಂದಿನ ಕರ್ತವ್ಯದ ಸಂದರ್ಭಗಳಿಗೆ ಪರಿಚಯಿಸಲಾಗಿತ್ತು. ಸದ್ಯ ಪರೇಡ್ ಮತ್ತಿತರ ಸಂದರ್ಭಗಳಲ್ಲಿ ಮಾತ್ರವೇ ಟರ್ಬನ್ಗಳನ್ನ ಬಳಸಲಾಗುತ್ತಿದೆ.
2018ರಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕಾನ್ಸ್ಟೇಬಲ್ಗಳ ಕ್ಯಾಪ್ ಬದಲಾವಣೆಯ ಕುರಿತ ಚರ್ಚಿಸಲಾಗಿತ್ತು. ಆದರೆ, ಅದಾಗಲೇ ಲಕ್ಷಾಂತರ ಸ್ಲೋಚ್ ಹ್ಯಾಟ್ಗಳು ಹೊಸದಾಗಿ ಸಿದ್ಧವಾಗಿದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ಪೀಕ್ ಕ್ಯಾಪ್ ವಿತರಣೆಗೆ ಒಮ್ಮತದ ಅಭಿಪ್ರಾಯ ಮೂಡಿರಲಿಲ್ಲ.
ಸ್ಲೋಚ್ ಹ್ಯಾಟ್ನ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಸ್ಲೋಚ್ ಹ್ಯಾಟ್ ಬಳಕೆಯಿಂದ ಕುತ್ತಿಗೆ ಅಸ್ವಾಭಾವಿಕವಾಗಿ ಮುಂದಕ್ಕೆ ಬಾಗುವಿಕೆ, ಭುಜ, ಕುತ್ತಿಗೆ ಮತ್ತು ಬೆನ್ನಿನ ಕೆಳಭಾಗದಲ್ಲಿ ನೋವುಂಟಾಗುವ ಅಪಾಯಗಳ ಕುರಿತು ಆರೋಗ್ಯ ಇಲಾಖೆ ತಿಳಿಸಿತ್ತು. ಅಲ್ಲದೇ ಪ್ರತಿಭಟನೆ, ರ್ಯಾಲಿ, ಅಪರಾಧಿಗಳನ್ನ ಬೆನ್ನತ್ತುವ ಸಂದರ್ಭಗಳಲ್ಲಿ ಸ್ಲೋಚ್ ಹ್ಯಾಟ್ ಧರಿಸಿ ಕರ್ತವ್ಯ ನಿರ್ವಹಿಸುವುದು ಕಿರಿಕಿರಿ ಉಂಟುಮಾಡುತ್ತಿತ್ತು. ಹ್ಯಾಟ್ ನೆಲಕ್ಕೆ ಬಿದ್ದರೆ ಇಲಾಖೆಯ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಹಳೆ ಮಾದರಿಯ ಹ್ಯಾಟ್ ಬದಲು ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವಂಥಹ ಎಲಾಸ್ಟಿಕ್ ಮಾದರಿಯ ಕ್ಯಾಪ್ಗಳನ್ನು ನೀಡಿದರೆ ಉತ್ತಮವೆಂದು ಪೊಲೀಸ್ ಸಿಬ್ಬಂದಿಗಳು (Police Staff) ಬಹುದಿನಗಳಿಂದಲೂ ಬೇಡಿಕೆಯಿಡುತ್ತಲೆ ಬಂದಿದ್ದರು. ಕೊನೆಯದಾಗಿ ಹ್ಯಾಟ್ ಬದಲಾವಣೆಗೆ ಸರ್ಕಾರ ಮುಂದಾಗಿದೆ.
ಇದನ್ನು ಓದಿ : ಅಕ್ಟೋಬರ್ 28ಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ. ಹವಮಾನ ಇಲಾಖೆ ಎಚ್ಚರಿಕೆ.
ಈ ಶ್ರೀಗಂಧ ಸ್ಮಗ್ಲರ್ ಗಳಿಗೆ ಪುಷ್ಪಾ ಸಿನೇಮಾ ಪ್ರೇರಣೆ. ಪೊಲೀಸರಲ್ಲಿ ಲಾಕ್ ಆದ ನಾಲ್ವರು ಚೋರರು.
ದಿ. ಬಂಗಾರಪ್ಪ ಸಾಮಾಜಿಕ ನ್ಯಾಯದ ಪ್ರತಿಪಾದನೆಯ ಧೀಮಂತ ನಾಯಕ: ರವೀಂದ್ರ ನಾಯ್ಕ

