ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಒಂದೇ ದಿನ ಇಬ್ಬರು ಮಹಿಳಾ ಜನಪ್ರತಿನಿಧಿಗಳು ಹೃದಯಾಘಾತದಿಂದಾಗಿ(Heart Attack) ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ(Uttarakannada District) ನಡೆದಿದೆ.
ಶಿರಸಿ(Sirsi) ತಾಲೂಕಿನ ಇಟಗುಳಿ ಗ್ರಾಮ ಪಂಚಾಯತ್ನ(Etaguli Grama Panchayat) ಮಾಜಿ ಅಧ್ಯಕ್ಷೆ ಗೀತಾ ಬೋವಿ ಹಾಗೂ ಅಂಕೋಲಾ(Ankola) ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್(Bhavikeri) ಸದಸ್ಯೆ ಸುಮಿತ್ರಾ ಬಂಟ್ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಶಿರಸಿ ಸರ್ಕaರಿ ಆಸ್ಪತ್ರೆಗೆ(Sirsi Government Hospital) ದಾಖಲಾಗಿ ಚೇತರಿಸಿಕೊಂಡು ಹೋಗಿದ್ದ ಗೀತಾ ಅವರು ಆಸ್ಪತ್ರೆಯಲ್ಲಿದ್ದಾಗ ಇಬ್ಬರಿಗೆ ರಕ್ತದಾನ(Blood Donate) ಮಾಡಿಸುವ ಮಹತ್ಕಾರ್ಯ ಮಾಡಿದ್ದರು. ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾಗಿದ್ದಾರೆ. ಶಿರಸಿಯ ಗೀತಾ ಬೋವಿ ನಿಧನಕ್ಕೆ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ(Bheemanna Naik) ಅವರು ಸಂತಾಪ(Condolence) ಸೂಚಿಸಿದ್ದು, ಕ್ಷೇತ್ರದಲ್ಲಿ ಇವತ್ತು ನಡೆಯಬೇಕಾಗಿದ್ದ ಎಲ್ಲಾ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ.
ಗ್ರಾಮ ಪಂಚಾಯತ್(Village Panchayat) ಮಟ್ಟದಲ್ಲಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಈ ಇಬ್ಬರು ಮಹಿಳೆಯರ ನಿಧನಕ್ಕೆ ಸ್ಥಳೀಯ ನಾಯಕರು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರು(Villagers) ಕಂಬನಿ ಮಿಡಿದಿದ್ದಾರೆ.
ಇದನ್ನು ಓದಿ : ಹಾಡು ಹಾಡುತ್ತಿದ್ದಾಗ ಎಎಸ್ಐ ಹೃದಯಾಘಾತದಿಂದ ನಿಧನ
ಹೊನ್ನಾವರದಲ್ಲಿ ಭೀಕರ ಅಪಘಾತ. ಓರ್ವ ಸಾವು. 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ.
ನಮ್ಮ ಕುಟುಂಬದ ತೀರ್ಮಾನವೇ ಅಂತಿಮ. ಬದಲಾವಣೆಯ ತೀರ್ಮಾನವೇ ಅವರಿಂದಲೇ : ಸಚಿವ ಮಂಕಾಳ ವೈದ್ಯ.

