ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಚಿಕ್ಕಮಗಳೂರು(Chikkamanglore) :ವಾಕಿಂಗ್ ಗೆ ಹೊರಟಿದ್ದ ವೃದ್ದರೊಬ್ಬರು ಸಮೀಪದ ಕಾಡಿನಲ್ಲಿ(Forest) ನಾಪತ್ತೆಯಾಗಿ ನಾಲ್ಕು ದಿನಗಳ ಬಳಿಕ ಪತ್ತೆಯಾದ ಘಟನೆ ಕೊಪ್ಪ ತಾಲೂಕಿನ(Koppa Taluku) ಗುಣವಂತೆ ಗ್ರಾಮದಿಂದ(Gunavante Village) ವರದಿಯಾಗಿದೆ.
75 ವರ್ಷದ ವೃದ್ದ ವೈದ್ಯ ವೆಂಕಟೇಗೌಡ ಎಂಬುವವರು ನವೆಂಬರ್ 2ರಂದು ವಾಕಿಂಗ್‌ಗೆಂದು(Walking) ಹೊರಟಿದ್ದರು. ಮರೆವಿನ ಖಾಯಿಲೆ ಇದ್ದ ವೈದ್ಯರಿಗೆ ವಾಪಸ್ ಬರಲು ಸಾಧ್ಯವಾಗಲಿಲ್ಲ. ನಡು ಮಧ್ಯೆ ಗುಣವಂತೆ ಗ್ರಾಮದ ಮನೆಯೊಂದರಲ್ಲಿ ನೀರು ಕುಡಿದು(Drinking Water) ಹೋಗಿದ್ದ ಅವರು, 4 ದಿನ ಕಾಡಲ್ಲೇ ಸುತ್ತಾಡಿ ಅಲ್ಲೇ ಉಳಿದಿದ್ದರು ಎನ್ನಲಾಗಿದೆ.
ನಾಪತ್ತೆಯಾದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಕಾಡು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಎಸ್ಪಿ ವಿಕ್ರಂ(SP Vikram) ಅವರ ಸೂಚನೆ ಮೇರೆಗೆ ಪೊಲೀಸ್ ಶ್ವಾನವನ್ನು(Police Dog Squad) ಪತ್ತೆ ಕಾರ್ಯಾಚರಣೆಗೆ ಬಳಸಲಾಗಿತ್ತು. ಈ ವೇಳೆ ಕಾಡಿನಲ್ಲಿ ಸಿಕ್ಕ ವೆಂಕಟೇಗೌಡರ ಪಂಚೆಯ ಜಾಡು ಹಿಡಿದು ಹೊರಟ ಪೊಲೀಸ್ ಶ್ವಾನ, ಕಾಡಿನೊಳಗೆ 5 ಕಿ.ಮೀ. ದೂರದಲ್ಲಿ ಆಳ ಪ್ರದೇಶದಲ್ಲಿದ್ದ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಇದನ್ನು ಓದಿ : ಅಂದರ್ ಬಾಹರ್ ಆಡಲು ಹೋಗಿ ಸಿಕ್ಕಿ ಬಿದ್ದ ಮೂವರು. ಏಳು ಮಂದಿ ಪರಾರಿ.
ಆರ್‌ಟಿಐ ಸೋಗಿನಲ್ಲಿ ಕೋಟಿ ರೂ. ಡಿಮ್ಯಾಂಡ್. ಪೊಲೀಸ್ ಆಯುಕ್ತ ನೇತೃತ್ವದ ತಂಡದಿಂದ ಹಲವರ ಬಂಧನ.
ಅಪಘಾತ ರಹಿತ ಸೇವೆಗೆ ಭಟ್ಕಳದ ರಾಮಚಂದ್ರ ನಾಯ್ಕ ಅವರಿಗೆ ‘ಸುರಕ್ಷಾ ಚಾಲಕ’ ಬೆಳ್ಳಿ ಪದಕ ಗೌರವ ಪ್ರಶಸ್ತಿ
ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ. ಸಹೋದರ ಜೈಲಿಗೆ.

