ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Banglore) : ಪರಿಸರ ಕಾಳಜಿಯಲ್ಲಿ ನಾಡಿಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದ ವೃಕ್ಷಮಾತೆ(Vrukshamate) ಸಾಲುಮರದ ತಿಮ್ಮಕ್ಕ(114) ಶುಕ್ರವಾರ ನಿಧನರಾಗಿದ್ದಾರೆ.
ಪದ್ಮಶ್ರೀ ಪುರಸ್ಕೃತೆ ತಿಮ್ಮಕ್ಕ(Padmashree Timmakka) ಅವರು ತೀವ್ರ ಉಸಿರಾಟದ ಕಾಯಿಲೆಯಿಂದ(Breathing Decease) ಬಳಲುತ್ತಿದ್ದ ಕಾರಣಕ್ಕೆ ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ(Jayanagara Apollo Hospital) ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು 12ಗಂಟೆಗೆ ವಿಧಿವಶರಾಗಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ(Gubbi Taluku) 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ(Salu Marada Timmakka) ಅವರು ವೃಕ್ಷಮಾತೆ ಎಂದೇ ಜನ ಜನಿತರಾದವರು. ಹುಲಿಕಲ್ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದ ತಿಮ್ಮಕ್ಕ ಅವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿ ಪೋಷಿಸಿದ್ದರು.
1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತಿಮ್ಮಕ್ಕ ಅವರ ನಿಧಾನದಿಂದಾಗಿ ನಾಡು ವೃಕ್ಷಮಾತೆಯನ್ನ ಕಳೆದುಕೊಳ್ಳುವಂತಾಗಿದೆ.
ಇದನ್ನು ಓದಿ : ರಾತ್ರಿ ಉಪನಿರ್ದೇಶಕಿ ವಾಹನ ಹಿಂಬಾಲಿಸಿದ ಮರಳು ಸಾಗಾಟದಾರರು. ಹೊನ್ನಾವರದಲ್ಲಿ ನಡೆದ ಘಟನೆ.
ಕಾರವಾರದಲ್ಲಿ ಭೀಕರ ಅಪಘಾತ. ಓರ್ವನ ದುರ್ಮರಣ. ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಗಂಭೀರ.
ಶಾಸಕ ಸತೀಶ್ ಸೈಲ್ ಗೆ ಕೊಂಚ ರಿಲೀಫ್. ಹೈಕೋರ್ಟ್ ನಿಂದ ಜಾಮೀನು ವಿಸ್ತರಣೆ

