ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ(Panjim) : ಕರ್ನಾಟಕ ಗಡಿ(Karnataka Boarder) ದಾಟಿ  ಗೋವಾದ(Goa) ಸರಹದ್ದಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ  ಮಲ್ಪೆ ಮೀನುಗಾರಿಕಾ ಯಾಂತ್ರಿಕ ಬೋಟ್ ನ್ನು(Malpe Fishing Boat) ಗೋವಾ ರಾಜ್ಯ ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿದೆ.

ಗೋವಾದ ಪ್ರದೇಶದಲ್ಲಿ  ಯಾಂತ್ರಿಕ ದೋಣಿಗಳು(Mechinized Boat)  ಮೀನುಗಾರಿಕೆ ನಡೆಸುತ್ತಿತ್ತು ಹೀಗಾಗಿ  ಕರಾವಳಿ ಕಾವಲು ಪಡೆಯ(Coastal Service Police) ಪೊಲೀಸರೊಂದಿಗೆ  ಮೀನುಗಾರಿಕಾ ಇಲಾಖೆ ಯಾಂತ್ರಿಕ  ದೋಣಿಯೊಂದನ್ನ  ವಶಪಡಿಸಿಕೊಂಡು  ಪಣಜಿಯ  ಬಂದರಿನಲ್ಲಿ ಇಡಲಾಗಿದೆ ಎನ್ನಲಾಗಿದೆ.

ಕಳೆದ ಕೆಲ ವರ್ಷಗಳಿಂದ ಗೋವಾ ಅರಬ್ಬಿ ಸಮುದ್ರದ(Goa Ocean Sea) ಸರಹದ್ದಿನಲ್ಲಿ ಅಕ್ರಮವಾಗಿ ಹೊರ ರಾಜ್ಯಗಳ ಬೋಟುಗಳು ಮೀನುಗಾರಿಕೆ ನಡೆಸುತ್ತಿರುವ ಆರೋಪವಿದೆ. ಈ  ಹಿನ್ನೆಲೆಯಲ್ಲಿ ಪಣಜಿಯ ಮೀನುಗಾರಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಮೀನುಗಾರಿಕೆ ನಡೆಸಿದ ಮಲ್ಪೆ ಮೀನುಗಾರಿಕಾ ಬೋಟ್ಗಳ ಮೇಲೆ  ಕಠಿಣ ಕ್ರಮ ಕೈಗೊಳ್ಳುವುದಾಗಿ ಗೋವಾ ರಾಜ್ಯ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ ‌: ಕಾರವಾರದಲ್ಲಿ ಅಕ್ರಮ ಗೋ ಸಾಗಾಟ. ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು. ಪೊಲೀಸ್ ವಶಕ್ಕೆ.

ದಾಂಡೇಲಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ. ಹಲವರಿಗೆ ಗಾಯ. ಆಸ್ಪತ್ರೆಯಲ್ಲಿ ಚಿಕಿತ್ಸೆ.

ಬೆಳಿಗ್ಗೆಯಿಂದ ಎರಡು ಅಪಘಾತ. ಆರು ಜನರ ದುರ್ಮರಣ.