ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)‌ ಗೋಕರ್ಣ(Gokarna) : ಸಪ್ತ ಸಾಗರಗಳ ಆಚೆಗೆ ಅರಳಿದ್ದ ಪ್ರೇಮವು ಪವಿತ್ರ ಭಾರತದ ಭೂಮಿಯಲ್ಲಿ ಸಪ್ತಪದಿ ತುಳಿದು ನೂತನ ಬದುಕಿಗೆ ಹೆಜ್ಜೆ ಹಾಕಿರುವ ಅಪರೂಪದ ಸಂಭ್ರಮಕ್ಕೆ ಗೋಕರ್ಣ(Celebration Gokarn) ಸಾಕ್ಷಿಯಾಯಿತು.

ಕುಡ್ಲೆ ಕಡಲತೀರದ(Kudle Beach) ಕೆಫೆ ಪ್ಯಾರಡೈಸ್ ರೆಸಾರ್ಟ್ ಆವರಣದಲ್ಲಿ ನಾರ್ವೇ ಮೂಲದ(Narve Native) ಜೋಡಿ ಭಾರತೀಯ ಸಂಸ್ಕೃತಿಯ ವೈದಿಕ ವಿಧಾನದಲ್ಲಿ ಮದುವೆಯಾಗಿದ್ದಾರೆ.

ನಾರ್ವೇ ದೇಶದ ಸ್ಯಾಮ್ ಹಾಗೂ ಆರ್ಟಿಮಾ ದಾಂಪತ್ಯ ಜೀವನಕ್ಕೆ(Couple Life) ಕಾಲಿಟ್ಟು, ಭಾರತೀಯ ಪರಂಪರೆಗೆ(Indian Heritage ಗೌರವ ಸೂಚಿಸುವಂತೆ ಯಜ್ಞಕುಂಡದ ಸುತ್ತ ಸಪ್ತಪದಿ ತುಳಿದರು. ಹಲವು ವರ್ಷಗಳಿಂದ ಗೋಕರ್ಣಕ್ಕೆ ಆಗಮಿಸುತ್ತಿರುವ ಸ್ಯಾಮ್ ಭಾರತೀಯ ಸಂಸ್ಕೃತಿಯ(Indian Culture) ಸೌಂದರ್ಯಕ್ಕೆ ಮಾರುಹೊಗಿದ್ದು, ಇದೇ ಕಾರಣಕ್ಕೆ ಪವಿತ್ರ ಕ್ಷೇತ್ರದಲ್ಲಿ ವಿವಾಹವಾಗುವ ನಿರ್ಧಾರ ಮಾಡಿದ್ದರೆಂದು ತಿಳಿದುಬಂದಿದೆ.

ಕೆಫೆ ಪ್ಯಾರಡೈಸ್‌ನ ಮಾಲಿಕ ಮುರಳಿ ಕಾಮತ್ ಅವರ ಆತಿಥ್ಯ ಮತ್ತು ಆತ್ಮೀಯತೆಯಿಂದ ಪ್ರಭಾವಿತರಾದ ಜೋಡಿ, ಅವರಿಗೆ ತಮ್ಮ ಜೀವನದ ಮಹತ್ವದ ಕ್ಷಣವನ್ನು ಸಾಕ್ಷಿಯಾಗಲು ಆಹ್ವಾನಿಸಿದ್ದರು. ವೈದಿಕ ಮಂತ್ರೋಚ್ಚಾರಣೆಗಳ ನಡುವೆ ವೇ. ಪ್ರಸನ್ನ ಜೋಗಭಟ್, ವೇ. ಮಹೇಶ್ ಅಡಿ, ವೇ. ಕೃಷ್ಣ ಸೂರಿ ಹಾಗೂ ವೇ. ವಿನಾಯಕ ಉಪಾಧ್ಯರು ವಿವಾಹ ವಿಧಿಗಳನ್ನು ನಡೆಸಿಕೊಟ್ಟರು.

ಪ್ರವಾಸಿಗರು, ಸ್ಥಳೀಯರು ಹಾಗೂ ಮುರಳಿ ಕಾಮತ್ ಕುಟುಂಬದವರು ಸಮಾರಂಭದಲ್ಲಿ ಪಾಲ್ಗೊಂಡು ನಾರ್ವೆ ಜೋಡಿಯ ಹೊಸ ಬದುಕಿಗೆ ಶುಭ ಹಾರೈಸಿದರು. ವೃತ್ತಿಯಲ್ಲಿ ಸ್ಯಾಮ್ ಪ್ರಮುಖ ಅಡುಗೆ ತಜ್ಞರಾಗಿದ್ದಾರೆ ಎಂದು ತಿಳಿದುಬಂದಿದೆ. ಗೋಕರ್ಣತೀರದಲ್ಲಿ(Gokarn Beach) ನಡೆದ ಈ ಅಪರೂಪದ ಸಂಸ್ಕೃತಿಯ ಸಂಯೋಜನೆ ಪ್ರವಾಸಿಗರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನು ಓದಿ : ಅರಣ್ಯ ಇಲಾಖೆ ದಿನಗೂಲಿ ನೌಕರನ ಪತ್ನಿ ಆತ್ಮಹತ್ಯೆ ಪತ್ರ ಬರೆದು ನಾಪತ್ತೆ

ರಾಜ್ಯಮಟ್ಟದ ಚಿತ್ರಕಲೆಯಲ್ಲಿ ಶಿರಸಿಯ ಬಿಂದು‌ ಪ್ರಥಮ. ಸಿಎಂ ಸಿದ್ದರಾಮಯ್ಯ ಅವರಿಂದ ಬಹುಮಾನ.

ನಿರ್ದೋಷಿ ತೀರ್ಪು. ಮುರುಘಾ ಶ್ರೀಗಳಿಗೆ ಬಿಗ್ ರಿಲೀಪ್.

ಪ್ಲ್ಯಾಟ್ ನೀಡುತ್ತೇನೆಂದು ಹಲವರಿಗೆ ಬಿಲ್ಡರ್ ಓರ್ವನಿಂದ ಮೋಸದ ಆರೋಪ.