ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಎನ್‌ಡಿಪಿಎಸ್ ಕಾಯ್ದೆಯಡಿ (NDPS Act) ಪ್ರತ್ಯೇಕ ಕಡೆ ದಾಳಿ ನಡೆಸಿದ ಭಟ್ಕಳ ಪೊಲೀಸರು(Bhatkal Police), ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಒಟ್ಟು ಐವರನ್ನು ಬಂಧಿಸಿದ್ದಾರೆ.

ಭಟ್ಕಳ ಶಹರ ಠಾಣೆಯ(Bhatkal Town Station) ಪೊಲೀಸರು ನಾಲ್ವರನ್ನು ಮತ್ತು‌ ಗ್ರಾಮೀಣ ಠಾಣೆಯ(Rural Station) ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯ ಫಿರ್ದೋಸ್‌ನಗರದ ಕೋಳಿ ಫಾರ್ಮ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಅಮಲಿನ ಸ್ಥಿತಿಯಲ್ಲಿ ತೂರಾಡುತ್ತಾ, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿ ತಗ್ಗರಗೋಡ ನಿವಾಸಿ ಮೊಹಮ್ಮದ್ ಸಲೀಂ (25) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಸಂಬಂಧ ಪೊಲೀಸರು ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್‌ ನಾಯ್ಕ ನೇತೃತ್ವದ ತಂಡ ನಗರದ ವಿವಿಧೆಡೆ ಮಿಂಚಿನ ಕಾರ್ಯಾಚರಣೆ ನಡೆಸಿ ಐವರನ್ನ ಬಂಧಿಸಿದ್ದಾರೆ‌. ಸಂತೆ ಮಾರ್ಕೆಟ್ ಸಮೀಪ ಮಾದಕ ದ್ರವ್ಯ ಸೇವಿಸಿದ್ದ ತಕಿಯಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಅನಾಸ್(18) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ‌. ಮುಗ್ಗುಂ ಕಾಲೋನಿ ಪಳ್ಳಿ ಸಮೀಪ ಖಾಜಿಯಾ ಸ್ಟ್ರೀಟ್‌ನ ಮುಸ್ತಾ ಹೌಸ್ ನಿವಾಸಿ ಅಬ್ದುಲ್ ಆಲಿಂ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಬ್ಬರ ವೈದ್ಯಕೀಯ ವರದಿಯಲ್ಲಿ(Medical Report) ಮಾದಕದ್ರವ್ಯ ಸೇವನೆ ದೃಢಪಟ್ಟಿದೆ. ಇದೇ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಶಹರ ಪೊಲೀಸರು ಇನ್ನುಳಿದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.