ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ(Yallapur) :  ತಾಲೂಕಿನ ಕಿರವತ್ತಿಯ ಬಳಿ ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ (Accident) ಸಂಭವಿಸಿ  ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಬೈಕ್ ಹಿಂಬದಿ ಸವಾರ ಗಾಯಗೊಂಡಿದ್ದಾನೆ .

ಯಲ್ಲಾಪುರದ ಬೈಲಂದೂರಿನ ಛಾಯಪ್ಪ ಸೋಮಾಪುರಕರ್ (45) ಮೃತ ದುರ್ದೈವಿ.   ಬೈಕ್ ನಲ್ಲಿದ್ದ ಪ್ರಭಾಕರ ಸೋಮಾಪುರಕರ್ ತೀವ್ರ ಗಾಯಗೊಂಡಿದ್ದು, ಯಲ್ಲಾಪುರ(Yallapur) ತಾಲೂಕಿನ ಸಮುದಾಯ ಆಸ್ಪತ್ರೆಯಲ್ಲಿ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್(Hubli Kims) ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸವಾರರು ಕಿರವತ್ತಿಯಿಂದ ಯಲ್ಲಾಪುರ(Kirawatti to Yallapur) ಕಡೆಗೆ ಬರುತ್ತಿದ್ದರು. ಅತಿ ವೇಗವಾಗಿ ಬೈಕ್ ಚಾಲನೆ ಮಾಡಿದ್ದರಿಂದ ಕಂಟೆನರ್ ವಾಹನಕ್ಕೆ ಢಿಕ್ಕಿ ಹೊಡೆದು ರಸ್ತೆಯ ಮೇಲೆ ಬಿದ್ದ ಸವಾರನ ತಲೆಯ ಮೇಲೆ ಲಾರಿಯ ಹರಿದಿದೆ. ಪರಿಣಾಮವಾಗಿ  ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಸ್ಥಳಕ್ಕೆ ಯಲ್ಲಾಪುರ ಪೊಲೀಸರು(Yallapur Police) ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ನಟ ವಿಜಯ್ 20 ಲಕ್ಷ ಪರಿಹಾರ ಘೋಷಣೆ.

ತಮಿಳುನಾಡಿನ ಕರೂರಿನಲ್ಲಿ ಕಾಲ್ತುಳಿತ. 39 ಜನರ ಸಾವು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ.