ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಬೈಂದೂರು(Bainduru) : ನಿಂತಿದ್ದ ಕಂಟೈನರ್‌ಗೆ(Container) ಎರ್ಟಿಗಾ ಕಾರು(Ertiga Car) ಡಿಕ್ಕಿ(Accident) ಹೊಡೆದ ಪರಿಣಾಮ ತಾಯಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಡರಾತ್ರಿ ನಡೆದಿದೆ.

ಮೃತರನ್ನು ಮಮತಾ (36) ಮತ್ತು ಅವರ ಮಗಳು ಧೃತಿಕಾ (14) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರಾಘು (40), ಜಾಹ್ನವಿ (12), ಚಾರ್ವಿ (10) ಹಾಗೂ ಕಿರಣ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ರಾಘು, ಜಾಹ್ನವಿ ಹಾಗೂ ಚಾರ್ವಿ ಅವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ(Kundapur Adarsha Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಗಾಯಾಳು ಕಿರಣ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ(Manipal KMC Hospital) ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಬೈಂದೂರು(Bainduru) ತಾಲೂಕಿನ ನಾವುಂದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ(Navunda NH 66) ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರು ಮೂಲದ(Bangalore Native) ಕುಟುಂಬವು ಉಡುಪಿ(Udupi) ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಗೋಕರ್ಣ ಹಾಗೂ ಮುರುಡೇಶ್ವರ(Gokarn and Murdeshwar) ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಸಹಕಾರಿ ಸಂಸ್ಥೆ ಚುನಾವಣೆ ಮತ್ತು ಸಿಎಂ ಮನೆಗೆ ಬಂದ ಉರಿಯಿಂದ ಹತ್ಯೆಗೆ ಯತ್ನ : ಗೋಪಾಲಕೃಷ್ಣ ಸಂಶಯ.

ಭಟ್ಕಳದಲ್ಲಿ ಬಾವುಟ ತೆರವುಗೊಳಿಸಿದ ನಗರಸಭೆ. ಕೆಲಕಾಲ ಉದ್ವೀಘ್ನ ವಾತಾವರಣ. ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು.

*