ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ರಾಜ್ಯದ ಪಡಿತರದಾರರಿಗೆ ಇನ್ಮುಂದೆ  ಅನ್ನಭಾಗ್ಯ ಯೋಜನೆಯಡಿ(Annabhagya Scheme) ಐದು ಕೆ.ಜಿ ಅಕ್ಕಿ ಜೊತೆಗೆ  5 ಕೆ.ಜಿ ‘ಇಂದಿರಾ ಆಹಾರ ಕಿಟ್'(Indira Food Kit) ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇಂದಿರಾ ಆಹಾರ ಕಿಟ್‌ನಲ್ಲಿ 2 ಕೆ.ಜಿ.ತೊಗರಿಬೇಳೆ, 1 ಕೆ.ಜಿ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ ಮತ್ತು 1 ಕೆ.ಜಿ ಉಪ್ಪು ಇರಲಿದೆ. ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಿಗೆ ಆಹಾರ ಕಿಟ್ ನೀಡಲು ಈ ತೀರ್ಮಾನವನ್ನು ರಾಜ್ಯ ಸರ್ಕಾರ(State Government) ತೆಗೆದುಕೊಂಡಿದೆ.

ಅನ್ನಭಾಗ್ಯ ಯೋಜನೆಯಡಿ(Annabhagya Scheme) ರಾಜ್ಯ ಸರ್ಕಾರ  ಬಡ ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ಘೋಷಣೆ ಮಾಡಿತ್ತು. ಆರಂಭದಲ್ಲಿ ಅಕ್ಕಿ ದಾಸ್ತಾನು ಇಲ್ಲದ ಕಾರಣ  10 ಕೆಜಿ ಬದಲು 5 ಕೆಜಿ ಅಕ್ಕಿ ನೀಡಿ, ಉಳಿದ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿ ಕುಟುಂಬದ ಯಜಮಾನರ ಖಾತೆಗೆ ಜಮೆ ಮಾಡಿತ್ತು. ಇದೀಗ  ವಿಧಾನಸೌಧದಲ್ಲಿ(Vidhanasoudha) ನಡೆದ ಸಚಿವ ಸಂಪುಟದಲ್ಲಿ ಆಹಾರ ಕಿಟ್(Food Kit) ನೀಡಲು ತೀರ್ಮಾನಿಸಿದೆ.

ಸರ್ಕಾರದ ತೀರ್ಮಾನದ ಬಗ್ಗೆ ಸಚಿವ ಎಚ್‌ ಕೆ ಪಾಟೀಲ್‌(H K Pateel) ಮಾಹಿತಿ ನೀಡಿದ್ದು, ” ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ಪರ್ಯಾಯವಾಗಿ “ಇಂದಿರಾ ಆಹಾರ ಕಿಟ್”(Indira Food Kit) ವಿತರಿಸಲು ಸಂಪುಟ ಅನುಮೋದನೆ ನೀಡಿದೆ ಎಂದಿದ್ದಾರೆ.

ಒಟ್ಟು  61.19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.  ಅನ್ನಭಾಗ್ಯ ಅಕ್ಕಿ ದುರ್ಬಳಕೆ ತಡೆಯುವುದು ಉದ್ದೇಶದಿಂದ ಸರ್ಕಾರ 5 ಕೆ.ಜಿ ಅಕ್ಕಿಯ ಜೊತೆಗೆ ಈ ಕಿಟ್  ನೀಡಲಾಗುತ್ತಿದೆ ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.

ಕುಟುಂಬಗಳಲ್ಲಿ 5 ಜನ ಇದ್ದರೆ 50 ಕೆಜಿ ಅಕ್ಕಿ ತಿಂಗಳಿಗೆ ಬರುತ್ತಿತ್ತು. ಅಷ್ಟು ಪ್ರಮಾಣದ ಅಕ್ಕಿ ಕುಟುಂಬಗಳಿಗೂ ಹೊರೆಯಾಗುತ್ತಿತ್ತು. ಅಲ್ಲದೇ ಕಾಳಸಂತೆಯಲ್ಲಿ ಅವು ಮಾರಾಟವಾಗುತಿತ್ತು.  ದಿನಸಿ ವಸ್ತುಗಳನ್ನ ಒಳಗೊಂಡ ಕಿಟ್ ನೀಡುತ್ತಿರುವುದು ಫಲಾನುಭವಿಗಳಿಗೂ ಅನುಕೂಲವಾಗಲಿದೆ ಎಂದು ಭಾವಿಸಲಾಗಿದೆ.

ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೇಳೆಗೆ 110 ರೂ. ದರ ಇದ್ದು, 2 ಕೆಜಿಗೆ 220 ರೂ. ಆಗಲಿದೆ. 1 ಕೆಜಿ ಅಡುಗೆ ಎಣ್ಣೆ ಕನಿಷ್ಠ 100 ರೂ., ಸಕ್ಕರೆ 10 ರೂ., ಉಪ್ಪು 10 ರೂ. ಸೇರಿ ಕಿಟ್‌ನ ಮೌಲ್ಯ 350 ಆಗಲಿದೆ. ಇದು ಸಾಮಾನ್ಯ ಕುಟುಂಬಗಳಿಗೂ ಅನುಕೂಲವಾಗಲಿದೆ ಎಂದು ಭಾವಿಸಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.

ಇದನ್ನು ಓದಿ : ಅಲೆಗಳ ಅಬ್ಬರಕ್ಕೆ ಮುಳುಗಿದ ಬೋಟ್. ಬಂದರು ಸಮೀಪವೇ ಘಟನೆ.

ಭಟ್ಕಳ ಮೂಲದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ. ದೌಡಾಯಿಸಿದ ಪೊಲೀಸರು.

ಸ್ನೇಹಿತರ ಜೊತೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದ ಯುವಕ *ವು.*

ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಕಾಂತಾರ 1. ಪ್ರಾದೇಶಿಕ ಸಿನೆಮಾ ಸಾರ್ವತ್ರಿಕವಾಗಿದ್ದಕ್ಕೆ ರಿಷಬ್ ಶೆಟ್ಟಿ ಹರ್ಷ.