ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು/ಭಟ್ಕಳ(Mangalore/Bhatkal) : ಭಟ್ಕಳ ತಾಲೂಕಿನ ಬೆಳಕೆಯಲ್ಲಿ ವೃದ್ದೆಯ ಚಿನ್ನದ ಸರ ಅಪಹರಿಸಿ(Gold Chain Snatching) ಪರಾರಿಯಾಗಿದ್ದ(Escaped) ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ(Arrest).
ಉಳ್ಳಾಲದ ಫೈಸಲ್ ಮತ್ತು ಮೈಸೂರಿನ ನಿತೀನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳೂರು ನಗರದ(Mangalore Town) ಯೆಯ್ಯಾಡಿ ಬಳಿ ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣದ ಬೆನ್ನತ್ತಿದ್ದ ಇಬ್ಬರನ್ನು ಕದ್ರಿ ಪೊಲೀಸರು(Kadri Police) ವಶಕ್ಕೆ ಪಡೆದು ವಿಚಾರಣೆ ನಡರಸಿದಾಗ ಭಟ್ಕಳದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕದ್ದು ಪರಾರಿಯಾಗಿ ಬಂದಿರೋದು ಗೊತ್ತಾಗಿದೆ.
ಯೆಯ್ಯಾಡಿಯ ಶ್ರೀಹರಿ ಕಾಂಪ್ಲೆಕ್ಸ್ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ ಕಂಪನಿಯ ಬೈಕನ್ನ ಡಿಸೆಂಬರ್ 22 ರಂದು ಕಳವು ಆದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ಉಳ್ಳಾಲದ ತೋಟ ಫೈಸಲ್ ಮತ್ತು ಮೈಸೂರಿನ ವಿನಾಯಕ ನಗರ ನಿವಾಸಿ ನಿತೀನ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನದ(Theft) ಕೃತ್ಯ ಒಪ್ಪಿಕೊಂಡಿದ್ದಾರೆ.
ಡಿಸೆಂಬರ್ 13 ರಂದು ಭಟ್ಕಳ ಗ್ರಾಮಿಣ ಪೊಲೀಸ್ ಠಾಣಾ(Bhatkal Rural Station) ಸರಹದ್ದಿನ ಗರ್ಡಿಹಿತ್ತು ಬೆಳಕೆಯ ವಯೋವೃದ್ಧ ಮಹಿಳೆ ಹೊನ್ನಮ್ಮ ಮಹಾದೇವ ನಾಯ್ಕ ಎಂಬವರ ಬಳಿ ನೀರು ಕೇಳುವ ನೆಪದಲ್ಲಿ ಕುತ್ತಿಗೆಯಿಂದ ಚಿನ್ನದ ಚೈನ್ ಕಸಿದು(Gold Chain Snatching) ಪರಾರಿಯಾಗಿದ್ದರು. ಈ ಬಗ್ಗೆ ಆರೋಪಿತರಿಬ್ಬರು ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ಒಂದು ಚಿನ್ನದ ಸರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ಪೈಸಲ್ ವಿರುದ್ಧ ಕರ್ನಾಟಕದ ಉಡುಪಿ(Udupi) ಕಾರ್ಕಳ(Karkal), ಮಣಿಪಾಲ(Manipal), ಮಂಗಳೂರು(Mangalore), ಬೆಳ್ತಂಗಡಿ(Beltangadi), ವಿಟ್ಲ(Vittla) ಕಂಕನಾಡಿ ನಗರ ಪೊಲೀಸ್ ಠಾಣೆ, ಪುತ್ತೂರು(Putturu), ಶಿರ್ವ(Shirva), ಸುರತ್ಕಲ್(Suratkal), ಕಡಬ(Kadaba), ಕೊಣಾಜೆ(Konaje), ಮಡಿಕೇರಿಯ ಕುಶಾಲ ನಗರ(Kushal nagar) ಹಾಗೂ ಕೇರಳ(Keral) ರಾಜ್ಯಗಳಲ್ಲಿ ದರೋಡೆ(Roberry), ಕಳ್ಳತನದ(Theft) ಮತ್ತು ಕೊಲೆ(Murder) ಪ್ರಕರಣ ಸೇರಿದಂತೆ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ. ಈತನ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 10ಕ್ಕಿಂತಲೂ ಹೆಚ್ಚು ಜಾಮೀನು ರಹಿತ ವಾರೆಂಟ್ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆತಪ್ಪಿಸಿಕೊಂಡಿದ್ದಾನೆಂದು ಮಾಹಿತಿ ದೊರೆತಿದೆ.
ಇದನ್ನು ಓದಿ : ಕಾರವಾರ ತಹಶಿಲ್ದಾರ್ ಕಚೇರಿಗೂ ಬಂತು ಹುಸಿ ಬಾಂಬ್ ಬೆದರಿಕೆ. ಪೊಲೀಸರು ಅಲರ್ಟ್.
