ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಭಟ್ಕಳ(Bhatkal) : ಮಹಿಳೆಯೋರ್ವಳನ್ನಸಾಮಾಜಿಕ ಜಾಲತಾಣದ(Social Media) ಮೂಲಕ ಪರಿಚಯಿಸಿಕೊಂಡು  ಅಶ್ಲೀಲ ಸಂದೇಶ(Obsence Message) ಕಳುಹಿಸಿ ಬೆದರಿಸುತ್ತಿದ್ದ ಆಸಾಮಿಯೋರ್ವನನ್ನು ಭಟ್ಕಳ ಪೊಲೀಸರು(Bhatkal Police) ಬಂಧಿಸಿದ್ದಾರೆ.

ಮಂಕಿ ಭಾಷಾ ಕಾಲೋನಿ ನಿವಾಸಿ ಮಹ್ಮದ್ ಯುಶಾ  ತಂದೆ ಮಹ್ಮದ್ ಸಾಯಿ ಅಬು ಮಹ್ಮದಾ(31) ಬಂಧಿತನಾಗಿದ್ದಾನೆ. ಈತ  ಭಟ್ಕಳ ಮುಗ್ದುಂ ಕಾಲನಿ ನಿವಾಸಿ ಮಹಿಳೆಯೊಂದಿಗೆ ಆರೋಪಿತನು ಸುಮಾರು  ವರ್ಷದ ಹಿಂದೆ ಸಾಮಾಜಿಕ ಜಾಲತಾಣದ(Social Media) ಮೂಲಕ ಪರಿಚಯಿಸಿಕೊಂಡಿದ್ದ.  ಆಕೆಯ ಮೊಬೈಲ್ ನಂಬರ್ ಪಡೆದು ಸಲುಗೆ ಬೆಳೆಸಿಕೊಂಡಿದ್ದಾನೆ. ನಂತರ ಮಹಿಳೆಯ ಖಾಸಗಿ ಫೋಟೊಗಳನ್ನು(Private Photos) ಪಡೆದು, ಪದೇಪದೇ ಕರೆ ಮಾಡಿ ಮಾತನಾಡದಿದ್ದರೆ ಫೋಟೊಗಳನ್ನು ಎಲ್ಲರಿಗೂ ಶೇರ್ ಮಾಡುವುದಾಗಿ ಬೆದರಿಕೆ(Threat) ಹಾಕುತ್ತಿದ್ದ ಎಂದು ಹೇಳಲಾಗಿದೆ.

ಮಹಿಳೆಯ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಕರೆ ಮಾಡಿ ಫೋಟೊಗಳನ್ನು ಹರಿಬಿಡುವುದಾಗಿ ಬೆದರಿಸಿ, ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ(Torture) ನೀಡುತ್ತಿದ್ದನೆಂದು ಆರೋಪಿಸಲಾಗಿತ್ತು.

ಈ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ(Bhatkal Town Station) ಪ್ರಕರಣ ದಾಖಲಿಸಿದ್ದರು. ಹೀಗಾಗಿ ಪೊಲೀಸರು  ತನಿಖೆ ನಡೆಸಿ ಆರೋಪಿತನನ್ನು ಬೆಂಗಳೂರಿನಲ್ಲಿ(Bangalore) ಪತ್ತೆಹಚ್ಚಿ ಬಂಧಿಸಿದ್ದಾರೆ. ಈತನಿಂದ ಎರಡು ಮೊಬೈಲ್‌ಗಳು ಹಾಗೂ ಪೆನ್‌ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಗೊಂಡ ವಸ್ತುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ. ಕೃಷ್ಣಮೂರ್ತಿ ಹಾಗೂ ಜಗದೀಶ ಎಂ., ಡಿವೈಎಸ್ಪಿ ಮಹೇಶ್ ಎಂ., ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ಪಿಎಸ್‌ಐ ನವೀನ್ ಎಸ್.ನಾಯ್ಕ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

ಇದನ್ನು ಓದಿ : ಎಸ್‌ಡಿಪಿಐ ರಾಜ್ಯಾಧ್ಯಕ್ಷ ಕಾರಿಗೆ ಬೆಂಕಿ. ಪ್ರಾಣಾಪಾಯದಿಂದ ಪಾರು.

ಅಂಕೋಲಾದ ಮಾನ ಕಳೆಯುತ್ತಿರುವ ಅಕ್ರಮ ದಂಧೆಕೋರರು.