ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುರ್ಡೇಶ್ವರ(Murdeshwar) : ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮುರ್ಡೇಶ್ವರದ ಗುಡಿಗದ್ದೆ ಕ್ರಾಸ್(Gudigadde Cross) ಬಳಿ ಸಂಭವಿಸಿದೆ.
40 ವರ್ಷದ ರಾಮಚಂದ್ರ ಮಂಜುನಾಥ ದೇವಾಡಿಗ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ಬೈಲೂರು ಸಮೀಪದ ಸಣ್ಣಬಲ್ಸೆ(Bailuru sannabalse) ನಿವಾಸಿಯಾಗಿದ್ದಾನೆ.
ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಾಮಚಂದ್ರ ಮಾರ್ಚ್ 21ರ ರಾತ್ರಿ ಮುರ್ಡೇಶ್ವರದಿಂದ ಬೈಲೂರು(Murdeshwar to Bailooru) ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಗುಡಿಗದ್ದೆ ಕ್ರಾಸ್ ಬಳಿ ಅವರ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ.
ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ (Murdeshwar Police Station) ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಶ್ರೀ ಸತ್ಯಸಾಯಿ ಪ್ರೇಮ ವಾಹಿನಿ ರಥಯಾತ್ರೆಗೆ ಅದ್ದೂರಿ ಸ್ವಾಗತ: ಛತ್ರಕೂರ್ವೆಯಲ್ಲಿ ಭಕ್ತಿ-ಭಾವದ ಮಹೋತ್ಸವ
ಪೇಪರ್ ಮಿಲ್ ಆವರಣದಲ್ಲಿ ಬಾರೀ ಬೆಂಕಿ. ಸ್ಥಳೀಯರ ಆತಂಕ.
ರಸ್ತೆ ಅಂಚಿನ ಮನೆಗೆ ನುಗ್ಗಿದ ಪ್ರವಾಸಿ ಕಾರು. ಸ್ಕೂಟರ್, ಗೇಟ್ ಜಖಂ.
‘ಪಡ್ತಿ ಪ್ರೀಮಿಯರ್ ಲೀಗ್ ಸೀಸನ್ 3’ ಕ್ರಿಕೆಟ್ ಟೂರ್ನಿ ಮಾರ್ಚ್ 25 ರಿಂದ ಆರಂಭ. ಹತ್ತು ತಂಡಗಳು ಭಾಗಿ
