ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸ್ಮನೆ ಬಳಿ ನಾಡಬಾಂಬ್ ಸ್ಫೋಟಿಸಿ(Bomb Blast) ಹಸುವೊಂದು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಲಕ್ಷ್ಮಣ ಗೌಡಾ ಹೊಸ್ಮನೆ ಅವರಿಗೆ ಸೇರಿದ ಹಸು ಮೇಯಲು ಹೊಲಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು(Hunting) ದುರುಳರು ಅರಣ್ಯ ಪ್ರದೇಶದಲ್ಲಿ ನಾಡಬಾಂಬ್(Country Bomb) ಇರಿಸಿದ್ದರು. ಮೇಯುತ್ತಿದ್ದ ಹಸಿವಿನ ನಾಡಬಾಂಬ್ ಸಿಕ್ಕಿ ಸ್ಪೋಟಗೊಂಡಿದೆ. ಪರಿಣಾಮವಾಗಿ ಹಸುವಿನ ಬಾಯಿಗೆ ಭಾರೀ ಪ್ರಮಾಣದ ಗಾಯವಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದೆ.
ಗಾಯಗೊಂಡ ಹಸುವಿಗೆ ಆಹಾರ ಸೇವನೆ ಹಾಗೂ ನೀರು ಕುಡಿಯುವಂತೆಯೂ ಆಗದೇ ತೊಂದರೆಪಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ದುರ್ಘಟನೆ ಗ್ರಾಮಸ್ಥರಲ್ಲಿ ಆಕ್ರೋಶ ಹಾಗೂ ಚಿಂತೆಯನ್ನ ಹುಟ್ಟುಹಾಕಿದೆ.
ವಿಷಯ ತಿಳಿದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಸಂತೋಷಕುಮಾರ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಿದ್ದು ನಾಡಬಾಂಬ್ ಇಟ್ಟ ವ್ಯಕ್ತಿಗಳಿಗಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ (Sirsi Rural Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಪಾಲಕರು ಬುದ್ದಿವಾದ ಹೇಳಿದ್ದಕ್ಕೆ ಕೆರೆಗೆ ಧುಮುಕಿ ವಿದ್ಯಾರ್ಥಿನಿ ಆತ್ಮತ್ಯೆ .
ಭಟ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ. ನಿಷೇಧಿತ ವಸ್ತುಗಳ ಜಪ್ತಿ. ಆರೋಪಿ ಬಂಧನ.