ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ(Siddar Village) ಅಕ್ರಮವಾಗಿ ಗೋ ಸಾಗಾಟ(Cattle Supply) ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು‌ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಮಾಹಿತಿ ಪಡೆದ ಸ್ಥಳೀಯರು ಶನಿವಾರ ರಾತ್ರಿ ಸಿದ್ದರ್ ಐಟಿಐ ಕಾಲೇಜು(Siddar ITI College) ಸಮೀಪ ವಾಹನವೊಂದನ್ನ ಹಿಂಬಾಲಿಸಿ ಇಬ್ಬರನ್ನು ತಡೆದು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ‌ ಟಾಟಾ ಇನ್ಟ್ರಾ ವಾಹನದಲ್ಲಿ ಕೋಣವೊಂದನ್ನ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಕಿರವತ್ತಿ(Kirawatti) ಮೂಲದ ಅಣ್ಣಪ್ಪ ಗೌಡಪ್ಪ ನಾಯ್ಕ ಹಾಗೂ ಶಿವಾನಂದ ಬಸವಣೆಪ್ಪ ರೊಟಗೂಡ್ ಎಂಬ ಇಬ್ಬರು ಆರೋಪಿಗಳನ್ನು ಸ್ಥಳೀಯರು ವಶಕ್ಕೆ ಪಡೆದು ಕಾರವಾರ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಕರಣದಲ್ಲಿ ಶೈಲೇಶ್ ನಾಯ್ಕ ಖಾರ್ಗೆಜೂಗ್ ಮತ್ತು ಪರಶುರಾಮ ಮಾಂಜ್ರೆಕರ್ ಕಿನ್ನರ ಎಂಬಿಬ್ಬರು ಇದ್ದು ಪರಾರಿಯಾಗಿದ್ದಾರೆ. ಪರಾರಿಯಾದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕಿನ್ನರದಿಂದ ಯಲ್ಲಾಪುರದತ್ತ(Kinner to Yallapur) ಕೋಣವನ್ನು ಸಾಗಿಸಲಾಗುತ್ತಿದ್ದು, ಸ್ಥಳೀಯರ ಅನುಮಾನ ವ್ಯಕ್ತವಾದ ಪರಿಣಾಮ ತಡೆದು ವಿಚಾರಣೆ ನಡೆಸಿದಾಗ ಅಕ್ರಮ ಗೋ ಸಾಗಾಟದ ವಿಷಯ ಬೆಳಕಿಗೆ ಬಂದಿದೆ. ಘಟನೆಯ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Karwar Rural Police Station ) ಪ್ರಕರಣ ದಾಖಲಾಗಿದೆ.

ಇದನ್ನು ಓದಿ ‌: ದಾಂಡೇಲಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ. ಹಲವರಿಗೆ ಗಾಯ. ಆಸ್ಪತ್ರೆಯಲ್ಲಿ ಚಿಕಿತ್ಸೆ.

ಬೆಳಿಗ್ಗೆಯಿಂದ ಎರಡು ಅಪಘಾತ. ಆರು ಜನರ ದುರ್ಮರಣ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತು ಉರಿದ ಲಾರಿ. ಸಂಚಾರ ಅಸ್ತವ್ಯಸ್ತ