ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Belagavi) : ರಾಜ್ಯದ ಮುಂದಿನ ಮುಖ್ಯಮಂತ್ರಿ(Chief Minister) ಸತೀಶ ಜಾರಕಿಹೊಳಿ(Satish Jarakkiholi) ಎಂದು ಸಿಎಂ ಪುತ್ರ ಯತಿಂದ್ರ ಹೇಳಿದ್ದಾರೆ.
ಜಾರಕಿಹೊಳಿ ಕುಟುಂಬಕ್ಕೆ ದಲಿತ ಸಿಎಂ(Dalita CM) ಪಟ್ಟ ಎಂದು ಹೇಳುವ ಮೂಲಕ ನವೆಂಬರ್ ಕ್ರಾಂತಿ ಮುನ್ಸೂಚನೆ ನೀಡಿದ್ದಾರೆ. ಬೆಳಗಾವಿ(Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಶ್ರೀ ಸಂತ ಕನಕದಾಸರ(Santa Kanakadas) ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ತಂದೆಯವರು ತಮ್ಮ ರಾಜಕೀಯ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ದಾಂತ ಇರುವ ನಾಯಕರು ಬೇಕಾಗಿದೆ. ಹೀಗಾಗಿ ಸತೀಶ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ. ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ ಎಂದು ಯತೀಂದ್ರ(Yatindra) ಹೇಳಿದ್ದಾರೆ.
ಇದನ್ನು ಓದಿ : ಹೊನ್ನಾವರದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಕೇದಾರನಾಥ ಧಾಮದಲ್ಲಿ ಪ್ರಾರ್ಥನೆ.
ಕಾರವಾರದಲ್ಲಿ ದೇವಾಲಯ ಕಳ್ಳತನ. ಪೊಲೀಸರಿಂದ ತನಿಖೆ