ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ(Goa) : ಆರ್ಪೋರಾದಲ್ಲಿನ   ನೈಟ್‌ಕ್ಲಬ್ ಅಗ್ನಿ ದುರಂತದಿಂದ(Night Club Fire Tragefy) 25 ಜನರ ಸಾವಿಗೆ ಕಾರಣರಾದ  ಲೂತ್ರಾ ಸಹೋದರರು‌(Lootra Brothers) ವಿದೇಶಕ್ಕೆ ಪರಾರಿಯಾಗಿದ್ದಾರೆ(Escaped). ಈ ನಡುವೆ ಗೋವಾ ಸರ್ಕಾರ(Goa Government) ಅವರಿಗೆ   ಮತ್ತೊಂದು  ಕ್ಲಬ್ ನೆಲಸಮಗೊಳಿಸಿದೆ.

ಗೌರವ ಲೂತ್ರಾ ಹಾಗೂ ಸೌರಭ ಲೂತ್ರಾ  ಸಹೋದರರು ಸಮುದ್ರ ತೀರಕ್ಕೆ(Sea Sore) ಹೊಂದಿಕೊಂಡಿರುವ ‘ಗೋವಾ ವೆಗಟ‌ರ್’ ಎಂಬ ರೆಸ್ಟೋರೆಂಟ್(Restaurant) ಸಮೂಹವನ್ನು ನಡೆಸುತ್ತಿದ್ದರು. ಸರ್ಕಾರಿ ಜಾಗದಲ್ಲಿ(Government Property) ಅಕ್ರಮವಾಗಿ ಹೋಟೆಲ್(Illegal Hotel) ಕಟ್ಟಿರುವ ಆರೋಪ ಇವರ ಮೇಲಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್(CM Pramod Sawant) ಅವರ ನಿರ್ದೇಶನದಂತೆ  ನೆಲಸಮಗೊಳಿಸಲಾಗಿದೆ.

ಅವರ ಮೇಲೆ ನರಮೇಧದ ಆರೋಪ ಹೊರಿಸಲಾಗಿದ್ದು,  ಶನಿವಾರ ಘಟನೆ ನಡೆದಿದ್ದು, ಭಾನುವಾರ ಮುಂಜಾನೆ 5-30ಕ್ಕೆ  ಥಾಯ್ಲೆಂಡ್‌ನ ಫುಕೆಟ್‌ಗೆ(Thailand Puket) ಇಂಡಿಗೊ ವಿಮಾನ(Indigo Flight) ಮೂಲಕ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅವರ ಬಂಧನಕ್ಕಾಗಿ  ಬ್ಲೂ ಕಾರ್ನರ್ ನೋಟಿಸ್ ಅನ್ನು(Blue Corner Notice) ಇಂಟರ್‌ಪೋಲ್(Interpol) ಹೊರಡಿಸಲಾಗಿದೆ.  ಅವರು ದೆಹಲಿ(Delhi), ಗೋವಾ(Goa), ಹರಿಯಾಣದ ಯಮುನಾ ನಗರ(Haryana Yamuna nagar) ಸೇರಿದಂತೆ ಹಲವೆಡೆ ‘ರೋಮಿಯೊ ಲೇನ್’(Romio Lane) ಎಂಬ ಹೆಸರಿನ ಸರಣಿ ಹೋಟೆಲುಗಳನ್ನು ಹೊಂದಿದ್ದಾರೆ. ದೆಹಲಿಯಲ್ಲಿ ತಮ್ಮ ಮೊದಲ ರೆಸ್ಟೋರೆಂಟ್ ‘ಮಾಮಾಸ್‌ ಬುಯಿ’ ಆರಂಭಿಸಿದ್ದರು. ಅದು ಯಶಸ್ವಿಯಾದ ಬೆನ್ನಲ್ಲೇ ದೇಶದ ವಿವಿಧ ನಗರಗಳಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದರು.

ಸಾಮಾಜಿಕ ಮಾದ್ಯಮಗಳಲ್ಲಿ‌ ಆ್ಯಕ್ಟಿವ್ ಆಗಿರುವ ಲೂತ್ರಾ ಸಹೋದರರು ಡಿಜೆ ನೈಟ್(DJ Night) ಹಾಗೂ ಇನ್ನಿತರ ಕಾರ್ಯಕ್ರಮಗಳ ಕುರಿತು ವ್ಯಾಪಕ ಪ್ರಚಾರ ನಡೆಸುತ್ತಿದ್ದರು. ದುರಂತ ನಡೆದ ಶನಿವಾರ ರಾತ್ರಿ ನೈಟ್ ಕ್ಲಬ್‌ನಲ್ಲಿ(Night Club) ‘ಬಾಲಿವುಡ್ ಬ್ಯಾಂಗರ್ ನೈಟ್’ ಕಾರ್ಯಕ್ರಮ(Bollywood Banger Night) ಆಯೋಜನೆಗೊಂಡಿತ್ತು. ವೇದಿಕೆಯಲ್ಲಿ ಬಾಣ ಬಿರುಸುಗಳನ್ನು ಸಿಡಿಸಿದಾಗ ಇಡೀ ವೇದಿಕೆಗೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಇಡೀ ನೈಟ್‌ಕ್ಲಬ್ ಹೊತ್ತಿ ಉರಿದು 25 ಜನರು ಸಮಾಧಿಯಾಗಿದ್ದರು.

ಇದನ್ನು ಓದಿ : ಮದ್ಯ ಸಾಗಿಸುತ್ತಿದ್ದ ಆಸಾಮಿ ಬೈಕ್ ಬಿಟ್ಟು ಪರಾರಿ. ಅಬಕಾರಿ ಕಾರ್ಯಾಚರಣೆ.

ನೇತ್ರಾಣಿ ಅಡ್ವೆಂಚರ್ ಅಧಿಕೃತ ಖಾತೆ ಹ್ಯಾಕ್. ದೂರು ದಾಖಲು.