ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಟ್ರಾಫಿಕ್ ನಿಯಮವನ್ನ ಮೀರಿ  ಯುವಕರಿಬ್ಬರು  ಪಟಾಕಿಗಳನ್ನು(Crackerd) ಸಿಡಿಸುತ್ತಾ ಬೈಕ್ ಡ್ರೈವ್  ಮಾಡಿದ ಹಿನ್ನಲೆಯಲ್ಲಿ ಕಾರವಾರ ಸಂಚಾರಿ ಠಾಣೆ(Karwar Traffic Station)  ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವೈರಲ್ ಆದ ವಿಡಿಯೋವನ್ನ  ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(Uttarakannada SP) ದೀಪನ್ ಎಂ ಎನ್  ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ(WhatsApp Channel) ಹಂಚಿಕೊಂಡಿದ್ದರಲ್ಲದೇ ಕ್ರಮ ಜರುಗಿಸಲು ಟ್ರಾಫಿಕ್ ಪೊಲೀಸರಿಗೆ ಸೂಚಿಸಿದ್ದರು.

ಕಾರವಾರ(Karwar) ನಂದನಗದ್ದಾದ ಆದಿತ್ಯ ಸಂದೀಪ್ ಹುಲ್ಗೋಕರ್ (22) ಮತ್ತು ವಿದೀಶ್ ಸಂದೀಪ್ ಜೋಗಳೇಕರ್ (20) ಎಂಬುವವರು  ಅಕ್ಟೋಬರ್ 22ರಂದು ಕಾರವಾರದ ನಂದನಗದ್ದಾ – ಬಾಂಡಿಶಿಟ್ಟಾ ರಸ್ತೆಯಲ್ಲಿ ಬೈಕ್ ನಲ್ಲಿ ಚಲಿಸುತ್ತಾ ಪಟಾಕಿ ಸಿಡಿಸಿದ್ದರು. ಯುವಕರ ಅಪಾಯಕಾರಿ ವರ್ತನೆಯ ವಿಡಿಯೋ ವೈರಲ್ ಆಗಿತ್ತು.  ಹುಚ್ಚಾಟ ಮೆರೆದ ಯುವಕರನ್ನು ಟ್ರಾಫಿಕ್ ಪೊಲೀಸರು(Traffic Police) ಬಂಧಿಸಿ, ನೋಟೀಸ್ ನೀಡಿದ ಬಳಿಕ ಬಿಡುಗಡೆ ಮಾಡಿದ್ದಾರೆ.

ಯಮಹಾ ಬೈಕ್‌ನಲ್ಲಿ(Yamaha Bike) ಸಂಚಾರ ನಡೆಸುತ್ತಿರುವವರಲ್ಲಿ ಹಿಂಬದಿಗೆ ಕುಳಿತಿದ್ದ ವಿದೀಶ್ ಪಟಾಕಿಯನ್ನು ಹೊತ್ತಿಸುತ್ತಿದ್ದಾನೆ. ಬೈಕ್ ಚಲಿಸುವಾಗ ಪಟಾಕಿ ಸ್ಫೋಟವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಈ ವಿಡಿಯೋ ಕ್ಲಿಪ್ ಹರಿದಾಡಿತ್ತು. ಯುವಕರ ವರ್ತನೆಗೆ ಅಸಮಧಾನ  ವ್ಯಕ್ತವಾಗಿತ್ತು.

ಕಾರವಾರ ಸಂಚಾರ ಠಾಣೆಯ(Karwar Traffic Station) ಪಿಎಸ್ಐ ಶ್ರೀಕಾಂತ್ ರಾಥೋಡ್ ವಿಡಿಯೋ  ಯುವಕರನ್ನು ಬೈಕ್ ಜೊತೆ ವಶಕ್ಕೆ ಪಡೆದಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿಯಲ್ಲಿ(Motor Vehicle Act) ದುಡುಕಿನ ಚಾಲನೆ, ಹೆಲ್ಮೆಟ್(Helmet) ಇಲ್ಲದೆ ಸವಾರಿ ಮತ್ತು ಸ್ಫೋಟಕ ವಸ್ತುಗಳ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ : ಕೆಡಿಸಿಸಿ ಬ್ಯಾಂಕ್ ಚುನಾವಣೆ. ಶಿವರಾಮ್ ಹೆಬ್ಬಾರ್ ಬಣಕ್ಕೆ ಮುನ್ನಡೆ. ಯಾರೆಲ್ಲ ಗೆದ್ದಿದ್ದಾರೆ.

ಅಮೇರಿಕನ್ ಕರೆನ್ಸಿ ಸಾಗಾಟ. ಭಟ್ಕಳ ವ್ಯಕ್ತಿ ಬಂಧನ