ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ (Joida):  ತಾಲೂಕಿನ ರಾಮನಗರದಲ್ಲಿ ವ್ಯಕ್ತಿಯೊರ್ವ ಅಪ್ರಾಪ್ತ ಬಾಲಕನ ಮೇಲೆ ಕತ್ತಿಯಿಂದ  ಹಲ್ಲೆ ಮಾಡಲು ಮುಂದಾಗಿರುವ  ವಿಡಿಯೋವೊಂದು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಮನಗರ(Ramanagar) ಭಾಗದ ವ್ಯಕ್ತಿಯೋರ್ವ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ  ನಡು ರಸ್ತೆಯಲ್ಲಿ ಕತ್ತಿ ಝಳಪಿಸಿ ಅಪ್ರಾಪ್ತ ಬಾಲಕನ ಕೊರಳ ಪಟ್ಟಿ ಹಿಡಿದು ಮರಾಠಿ ಭಾಷೆಯಲ್ಲಿ ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಹೇಳುತ್ತಿದ್ದಾನೆ.  ಆತನನ್ನ ಇನ್ನೋರ್ವ ತಡೆದು ಸಮಧಾನ ಮಾಡುತ್ತಿರೋದು ವಿಡಿಯೋದಲ್ಲಿದೆ.

ಹೀಗೆ ರಸ್ತೆಯಲ್ಲಿ ಸಾರ್ವಜನಿಕವಾಗಿ ಕತ್ತಿ ಹಿಡಿದು  ಗೂಂಡಾಗಿರಿ ಪ್ರದರ್ಶಿಸಿರುವುದು ಭಯ ಉಂಟು ಮಾಡಿದ್ದು ಕೂಡಲೇ ಈ ಬಗ್ಗೆ ಕ್ರಮ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಮನಗರ(Ramanagar) ಭಾಗದಲ್ಲಿ ಇಂಥಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನ ಹರಿಸಿ ದುಂಡಾವರ್ತನೆ ತೋರುವವರ ಮೇಲೆ ಕ್ರಮ ಕೈಗೊಂಡು ಜನರ ರಕ್ಷಣೆ ಮಾಡಬೇಕಾಗಿದೆ‌.

ಇದನ್ನು ಓದಿ : ಉತ್ತರಕನ್ನಡ ಜಿಲ್ಲೆ ಸೇರಿ ರಾಜ್ಯದಲ್ಲಿ ಬಾರೀ ಮಳೆ ಗಾಳಿ ಮುನ್ಸೂಚನೆ

ಸಾಲ ತೀರಿಸಲು ಮಗುವನ್ನೆ  ಮಾರಾಟ ಮಾಡಿದ ದಂಪತಿ