ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡು(Mundgod) : ಟಿಬೇಟಿಯನ್ ಧರ್ಮಗುರು(Tibetian priest) ದಲಾಯಿಲಾಮ(Dalai Lama) ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿಗೆ(Mundgod) ಶುಕ್ರವಾರ ಆಗಮಿಸಿದರು. 45 ದಿನಗಳ ಕಾಲ ಇಲ್ಲಿನ ಟಿಬೇಟಿಯನ್ ಕ್ಯಾಂಪಿನಲ್ಲಿ(Tibetian Camp) ವಾಸ್ತವ್ಯ ಮಾಡಲಿರುವ ಲಾಮಾ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ.
ಹುಬ್ಬಳ್ಳಿ(Hubballi) ತಡಸ ಮೂಲಕ ಮುಂಡಗೋಡ(Mundgod) ತಾಲೂಕಿಗೆ ಆಗಮಿಸಿದ ದಲಾಯಿಲಾಮಾ ಅವರನ್ನು ಉತ್ತರ ಕನ್ನಡ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸ್ವಾಗತಿಸಿದರು.
ಕ್ಯಾಂಪ್ ನಂಬರ 6ನಲ್ಲಿ ಬೌದ್ಧ ಬಿಕ್ಕುಗಳನ್ನು ಉದ್ದೇಶಿಸಿ ದಲಾಯಿ ಲಾಮಾ(Dalai Lama) ಮಾತನಾಡಿದರು. ಒಟ್ಟು 45 ದಿನಗಳ ಕಾಲ ಟಿಬೇಟಿಯನ್ ಕಾಲೋನಿಯಲ್ಲಿರುವ ಇರಲಿದ್ದು, ದೇಶ ವಿದೇಶಗಳ ಗಣ್ಯರು, ಬೌಧ್ಧ ಬಿಕ್ಕುಗಳು ಆಗಮಿಸಲಿದ್ದಾರೆ.
ದಲಾಯಿಲಾಮಾ(Dalai Lama) ಆಗಮನದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮುಂಡಗೋಡು ಟಿಬೇಟಿಯನ್ ಕಾಲೋನಿ(Mundgod Tibetian Colony) ಸುತ್ತಮುತ್ತ 592 ಪೊಲೀಸರನ್ನ ನಿಯೋಜಿಸಲಾಗಿದೆ. ಆರು ವರ್ಷಗಳ ನಂತರ ಮುಂಡಗೋಡಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ(Noble Peace Award) ವಿಜೇತ, ಟಿಬೇಟಿಯನ್ ಧರ್ಮಗುರು ದಲಾಯಿಲಾಮಾ ಆಗಮಿಸಿದ್ದಾರೆ. ಲಾಮಾ ಆಗಮನದ ಹಿನ್ನಲೆಯಲ್ಲಿ ಟಿಬೆಟಿಯನ್ ಕ್ಯಾಂಪಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಇದನ್ನು ಓದಿ :ಹಬ್ಬುವಾಡ ರಸ್ತೆ ಅವ್ಯವಸ್ಥೆ. ಡಿಸೆಂಬರ್ 16 ಕ್ಕೆ ಕುಡಿಕೆಯಲ್ಲಿ ಭಿಕ್ಷೆ ಬೇಡುವ ವಿನೂತನ ಪ್ರತಿಭಟನೆ.
