ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Banglore) : ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅಭಿನಯದ ‘ದಿ ಡೆವಿಲ್’ ಸಿನೇಮಾ(The Devil Cinema) ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ.

ರಿಲೀಸ್(Realesed) ಆದ ಮೊದಲ ದಿನವೇ  ದೊಡ್ಡ ಮಟ್ಟದಲ್ಲೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೂಲಗಳ ಪ್ರಕಾರ ‘ದಿ ಡೆವಿಲ್'(The Devil) ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 13.8ಕೋಟಿ ಎನ್ನಲಾಗಿದೆ.

ಕನ್ನಡದ ಸಿನಿಮಾಗಳ ಪಾಲಿಗೆ ಒಂದೇ ದಿನಕ್ಕೆ  13 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ದಾಖಲೆಯ ವಿಷಯವೆಂದು‌ ಹೇಳಲಾಗಿದೆ. ಇಷ್ಟೊಂದು ಗಳಿಕೆಗೆ ಟಿಕೆಟ್ ಬೆಲೆ ಕೂಡ ಕಾರಣ ಎನ್ನಬಹುದು. ಪಿವಿಆರ್(PVR), ಐನಾಕ್ಸ್​​ ಮೊದಲಾದ ಮಲ್ಟಿಪ್ಲೆಕ್ಸ್​ ಚಿತ್ರ ಮಂದಿರಗಳಲ್ಲಿ(Multiflex Theatre) ಟಿಕೆಟ್ ದರ 500 ರೂಪಾಯಿಗಳಿಂದಲೇ  ಆರಂಭ ಎನ್ನುವ ಹಾಗಿತ್ತು. ಸಿಂಗಲ್ ಥೀಯೇಟರ್ ಗಳಲ್ಲಿ 400 ರೂಪಾಯಿವರೆಗೂ ಟಿಕೆಟ್ ದರ ಇತ್ತು. ಇದರಿಂದಾಗಿಯೇ ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

ಪ್ಯಾನ್ ಇಂಡಿಯನ್ ಸಿನಿಮಾಗಳ ಸಿನಿಮಾ ಬಗ್ಗೆ ಕರ್ನಾಟಕ(Karnataka) ಮಾತ್ರವಲ್ಲ ಇಡೀ ದೇಶವೇ ನಿರೀಕ್ಷೆ ಮಾಡಿತ್ತು. ಆದರೆ ಚಿತ್ರ ಕರ್ನಾಟಕದಲ್ಲಿ ದಾಖಲೆಯ ಸನಿಹಕ್ಕೆ ‘ಡೆವಿಲ್’ ಚಿತ್ರ ಬಂದು ಸೇರುತ್ತಿದೆ. ಆದರೆ ದರ್ಶನ್ ಅವರ  ಹಿಂದಿನ ದಾಖಲೆಯ ಕಲೆಕ್ಷನ್ ಆಗಿರುವ ‘ರಾಬರ್ಟ್’ ಚಿತ್ರದ(Robert Cinema) ಮೊದಲ ದಿನದ ಗಳಿಕೆಯನ್ನು ಮುರಿದಿದೆ  ಹೀಗಾಗಿ ದರ್ಶನ್ ಹೆಸರಲ್ಲಿ ‘ಡೆವಿಲ್ ಹೊಸ ದಾಖಲೆ’ ಬರೆದಂತಾಗಿದೆ.

ಇದನ್ನು ಓದಿ : ಮುಂಡಗೋಡಿಗೆ ಟಿಬೇಟಿಯನ್ ‌ಧರ್ಮಗುರು ದಲಾಯಿಲಾಮ. ಹೆಚ್ಚಿನ ಪೊಲೀಸ್ ಬಂದೋಬಸ್ತ್.