ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಡಿಸೆಂಬರ್ 22ರಿಂದ 28ರವರೆಗೆ ನಡೆಯುವ ಕರಾವಳಿ ಉತ್ಸವದ ಕಡಲತಡಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು.
ಡಿ.22 ರಂದು ಮಧ್ಯಾಹ್ನ 4 ಗಂಟೆಗೆ ಸುಭಾಷಚಂದ್ರ ವೃತ್ತದಿಂದ ಮಯೂರ ವರ್ಮ ವೇದಿಕೆಯ ವರೆಗೆ 14 ಕಲಾ ತಂಡಗಳಿಂದ ಮೆರವಣಿಗೆ ಹಾಗೂ ಮೀನುಗಾರರ ಲಾಟೀನು ಪ್ರದರ್ಶನ ಹಾಗೂ ಶಂಕರ ಮಹಾದೇವನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.23 ರಂದು ಮಧ್ಯಾಹ್ನ 12 ಗಂಟೆಗೆ ಛಾಯಾಚಿತ್ರ ಪ್ರದರ್ಶನ ಹಾಗೂ ರೀಲ್ಸ್ ಪ್ರದರ್ಶನ, ಸಂಜೆ 5.30 ಗಂಟೆಯಿಂದ ಶ್ರೀ ಬ್ರಹ್ಮದೇವ ಗುಮಟಾ ಪಾಂಗ್ ಕಲಾ ತಂಡದಿಂದ ಗುಮಟಾ ಪಾಂಗ್ ವಾದ್ಯ ಪ್ರದರ್ಶನ, ಸುನೀಲ್ ಬಾರ್ಕೂರ ಅವರಿಂದ ಸಂಗೀತ ಕಾರ್ಯಕ್ರಮ, ಸುಮಂಗಲಾ ದೇಸಾಯಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಮತ್ತು ಜಾನಪದ ಗೀತೆ, ಕಲಾ ಭಾರತಿ, ಕಲಾ ವೈವಿಧ್ಯ ತಂಡದ ಮನೋಜ ಅ. ಪಾಲೇಕರ ಅವರಿಂದ ರೂಪಕ ಗೊಂಬೆಯಾಟ ಮಿಮಿಕ್ರಿ, ಸುಜಾತಾ ಕೆ ಹರಿಕಂತ್ರ ಅವರಿಂದ ಯೋಗ ನೃತ್ಯ, ಸ್ವರ ಸಂಗೀತ ರಸಮಂಜರಿ ತಂಡದಿಂದ ಸಂಗೀತ ರಸಮಂಜರಿ ಹಾಗೂ ಗುರುಕಿರಣ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.24 ರಂದು ಬೆಳಗ್ಗೆ 9 ಗಂಟೆಗೆ ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಂಗೋಲಿ ಸ್ಪರ್ಧೆ, ಮಾಲಾದೇವಿ ಮೈದಾನದಲ್ಲಿ ಅಡುಗೆ ಸ್ಪರ್ಧೆ ಸಂಜೆ 5.30 ಗಂಟೆಯಿಂದ ಎ2 ಮ್ಯೂಸಿಕ್ ಸ್ಟಾರ್ ತಂಡದಿಂದ ಸಂಗೀತ ಕಾರ್ಯಕ್ರಮ, ನಾಟ್ಯರಂಭ ನೃತ್ಯ ಸಂಸ್ಥೆಯ ಅಭಿಷೇಕ್ ಜಿ ನೇತ್ರೇಕರ ಅವರಿಂದ ನೃತ್ಯ, ಕುಮಾರ ಮಹಾತ್ಮ ಎಮ್ ಜೈನ್ ಅವರಿಂದ ಪೌರಾಣಿಕ ಕತೆ, ಚಿದಂಬರ್ ರಾಮಪ್ಪ ನಾಯ್ಕ ಅವರಿಂದ ಯಕ್ಷಗಾನ ಪ್ರದರ್ಶನ, ಭಾವೈಕ್ಯತೆ ಡೊಳ್ಳಿನ ಪದ ತಂಡದ ಇಮಾಮಸಾಬ್ ಎಂ ವಲ್ಲಪ್ಪನವರ ಅವರಿಂದ ಡೊಳ್ಳಿನ ಪದ, ಕಲ್ಪನಾ ರಶ್ಮಿ ಕಲಾಲೋಕ ತಂಡದಿಂದ ನೃತ್ಯ ಹಾಗೂ ಸೋನು ನಿಗಮ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.25 ರಂದು ಮಧ್ಯಾಹ್ನ 3 ಗಂಟೆಗೆ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಗಾಳಿಪಟ ಮತ್ತು ಮರಳು ಕಲೆ, ಸಂಜೆ 5.30 ಗಂಟೆಯಿಂದ ನೃತ್ಮಾಮೃತ ಕಲಾ ಕೇಂದ್ರದಿಂದ ನೃತ್ಯ, ಮೇದಾ ಭಟ್ಟ ಅವರಿಂದ ಶಾಸ್ತ್ರೀಯ ಸಂಗೀತ, ನಾಣ್ಯರಾಣಿ ಭರತನಾಟ್ಯ ನೃತ್ಯ ಕಲಾ ಕೇಂದ್ರ ಸಮಿತಿಯ ನಾಗವೇಣಿ ಎಂ ಹೆಗಡೆ ಅವರಿಂದ ಭರತನಾಟ್ಯ, ವೈಶಾಲಿ ಮಾಂಜ್ರೇಕರ ಅವರಿಂದ ಸಂಗೀತ, ಸ್ಟಾರ್ ಚಾಯ್ಸ್ ನೃತ್ಯ ಕಲಾ ತಂಡದಿಂದ ನೃತ್ಯ, ರಪ್ತಾರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.26 ರಂದು ಬೆಳಗ್ಗೆ 7 ಗಂಟೆಗೆ ಕರಾವಳಿ ಉತ್ಸವ ವೇದಿಕೆಯಿಂದ ಮೂರು ವಿಭಾಗಳಲ್ಲಿ 21 ಕಿ.ಮೀ (ಪುರುಷ/ಮಹಿಳೆ), 10 ಕಿ.ಮೀ (ಪುರುಷ/ಮಹಿಳೆ), 5 ಕಿ.ಮೀ (ಪುರುಷ/ಮಹಿಳೆ )ಕರಾವಳಿ ರನ್ ಮ್ಯಾರಥಾನ್, ಸಂಜೆ 5.30 ಗಂಟೆಯಿಂದ ಕವಿಗೋಷ್ಠಿ, ಲಾವಣಿ ನೃತ್ಯ ಹಾಗೂ ರಾಜೇಶ ಕೃಷ್ಣನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.27 ರಂದು ಬೆಳಗ್ಗೆ 9 ಗಂಟೆಗೆ ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ, ಸಂಜೆ 5.30 ಗಂಟೆಯಿಂದ ಓಶಿಯನ್ ಹಾರ್ಟ ಬ್ರೇಕರ್ಸ್ ಡಾನ್ಸ್ ಗ್ರೂಪ್ ನ ಜಗದೀಶ ಎಂ ಗೌಡ ಅವರಿಂದ ನೃತ್ಯ ಪ್ರದರ್ಶನ, ದೀಶಾ ಹರಿಕಂತ್ರ ಮತ್ತು ಶಿಲ್ಪಾ ನಾಯ್ಕ ಅವರಿಂದ ನೃತ್ಯ ಪ್ರದರ್ಶನ, ಚಿತ್ರಲೇಖಾ ಮಂಜುನಾಥ ನಾಯ್ಕ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಕೊಳಲು ವಾದನ, ದೀಪ್ತಿ ಅರ್ಗೇಕರ ಅವರಿಂದ ಸುಗಮ ಸಂಗೀತ, ಶ್ರೇಯಾ ಅಭಿವೃದ್ಧಿ ಟ್ರಸ್ ಅವರಿಂದ ಯಕ್ಷಗಾನ ನೃತ್ಯ, ದರ್ಶಿನಿ ಪ್ರಶಾಂತ ಶೆಟ್ಟಿ ಮತ್ತು ವರ್ಷಿಣಿ ಪ್ರಶಾಂತ ಶೆಟ್ಟಿ ಅವರಿಂದ ಸುಗಮ ಸಂಗೀತ ಹಾಗೂ ಮಹಮ್ಮದ್ ದಾನೀಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.28ರಂದು ಬೆಳಗ್ಗೆ 9 ಗಂಟೆಗೆ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್ ಪಂದ್ಯಾವಳಿ ಮತ್ತು ಮದ್ಯಾಹ್ನ 3 ಗಂಟೆಗೆ ಅಲಿಗದ್ದಾ ತೀರದಿಂದ ರವೀಂದ್ರನಾಥ ಠಾಗೋರ್ ಕಡಲ ತೀರದ ವರೆಗೆ ದೋಣಿ ಸ್ಪರ್ಧೆ, ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ದಲೇರ್ ಮೆಹಂದಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಇದನ್ನು ಓದಿ : ಡಿಸೆಂಬರ್ 22ರಿಂದ ನಡೆಯುವ ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ.
ವರ್ಷದ ಮೊದಲ ಕಡಲಾಮೆ ಗೂಡು ಪತ್ತೆ. ಅರಣ್ಯ ಇಲಾಖೆಯಿಂದ ಮೀನುಗಾರನಿಗೆ ಬಹುಮಾನ.
ದೇವಿಯ ಮುಂದೆ ತಲೆ ಬಾಗಿದ ಕನಕಪುರ ಬಂಡೆ. ಇನ್ನೊಂದು ತಿಂಗಳಲ್ಲಿ ಬಾರೀ ಕುತೂಹಲ.
