ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಕಾರವಾರದಿಂದ ಬಿಣಗಾ(Karwar to Binaga) ಕಡೆ ತೆರಳುವ ವಾಹನ ಸವಾರರೇ ಎಚ್ಚರ! ಇಲ್ಲಿನ ರಾ. ಹೆದ್ದಾರಿ(National Highway) ಪಕ್ಕದ ಸರ್ವೀಸ್ ರಸ್ತೆಯಲ್ಲಿ(Service Road) ಬಾರೀ ಹೊಂಡವೊಂದು(Pothole) ರಾತ್ರಿ ಕಾಣಿಸಿಕೊಂಡಿದೆ. ಹೀಗಾಗಿ ಅಪಾಯವಾಗುವ ಸಾಧ್ಯತೆ ಇದೆ.
ಲಂಡನ್ ಬ್ರಿಡ್ಜ್(London Bridge) ಸಮೀಪದಲ್ಲಿ ಸರ್ವಿಸ್ ರಸ್ತೆಯಲ್ಲಿ ಹೊಂಡ ಬಿದ್ದಿರುವುದನ್ನ ನೌಕಾ ಅಗ್ನಿಶಾಮಕ ದಳದ(Navy Fire Brigade) ಸಿಬ್ಬಂದಿ ಸುಭಾಷ್ ನಾಯ್ಕ ಅವರು ಗಮನಿಸಿದ್ದಾರೆ. ಬಳಿಕ ಹೊಂಡಕ್ಕೆ ಕಲ್ಲು ಹಾಕಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾರವಾರದಿಂದ ಬಿಣಗಾ ಕಡೆ ಸಂಚರಿಸುವ ವಾಹನ ಸವಾರರಿಗೆ ಮುಂದೆ ಏನಾದರೂ ಅನಾಹುತವಾಗಬಹುದು ಏಕಾಏಕಿಯಾಗಿ ಹೊಂಡ ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.
ಗೋವಾದಿಂದ ಅಂಕೋಲಾ(Goa to Binaga) ಕಡೆ ತೆರಳುವ ವಾಹನಗಳು ಪ್ಲೈಓವರ್ ಮೇಲ್ಭಾಗದಿಂದ ಸಂಚರಿಸುತ್ತವೆ. ಆದರೆ ಕಾರವಾರ ನಗರದಿಂದ ಅಂಕೋಲಾ(Karwar town to Ankola) ಕಡೆ ತೆರಳುವವರು ಇದೇ ಸರ್ವಿಸ್ ರಸ್ತೆ ಮೂಲಕ ಹೋಗಬೇಕಾಗಿದೆ. ಹೀಗಾಗಿ ಸಂಬಂಧಪಟ್ಟ ಐಆರ್ಬಿ(IRB), ರಾ. ಹೆದ್ದಾರಿ ಇಲಾಖೆ(NH Department), ಜಿಲ್ಲಾಡಳಿತ(District Administration) ಈ ಬಗ್ಗೆ ಗಮನಹರಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕಾಗಿದೆ.
ಇದನ್ನು ಓದಿ : ಅನಾರೋಗ್ಯದ ನಡುವೆ ಓಡಾಟ ನಡೆಸುತ್ತಿರೋದ್ಯಾಕೆ? ಶಾಸಕ ಸತೀಶ ಸೈಲ್ ಗೆ ಗುರುವಾರದವರೆಗೆ ಜಾಮೀನು ವಿಸ್ತರಣೆ.
ದೆಹಲಿ ಬಾರೀ ಸ್ಪೋಟ. ಹತ್ತಕ್ಕೂ ಹೆಚ್ಚು ಜನರ ದುರ್ಮರಣ. ದೇಶಾದ್ಯಂತ ಹೈ ಅಲರ್ಟ್.
ಪೋಷಕರೇ ಮಕ್ಕಳಿಗೆ ಆಹಾರ ನೀಡುವ ಮೊದಲು ಎಚ್ಚರ! ಬಿಸ್ಕೇಟ್ ನಲ್ಲಿ ಹುಳು ಪತ್ತೆ.
ನವೆಂಬರ್ 28ರಂದು ಗೋಕರ್ಣ ಪರ್ತಗಾಳಿಗೆ ಪ್ರಧಾನಿ ನರೇಂದ್ರ ಮೋದಿ .ಶ್ರೀರಾಮನ ಕಂಚಿನ ಮೂರ್ತಿ ಅನಾವರಣ.
ರಾತ್ರಿ ರಸ್ತೆಯಲ್ಲಿ ಬೃಹತ್ ಕಾಡಾನೆ ಪ್ರತ್ಯಕ್ಷ. ವಾಹನ ಸವಾರರ ಎದೆಯಲ್ಲಿ ನಡುಕ.

