ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಜಿಲ್ಲಾಸ್ಪತ್ರೆಯ ಸರ್ಜನ್(District Surgeon) ಕಚೇರಿ ಮೇಲೆ ಲೋಕಾಯುಕ್ತ ದಾಳಿ(Lokayukta Raid) ನಡೆಸಲಾಗಿದೆ. ಲಂಚ ಪಡೆಯುತ್ತಿದ್ದ ಡಾ. ಶಿವಾನಂದ ಕುಡ್ತಲಕರ್ ಅವರನ್ನ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಗುರುವಾರ ಮಧ್ಯಾಹ್ನ ಟೆಂಡರುದಾರರೋರ್ವರಿಂದ ಕಮಿಷನ್ ಹಣ ಪಡೆಯುವ ವೇಳೆ  ಲೋಕಾಯುಕ್ತರು‌ ದಾಳಿ ನಡೆಸಿದ್ದರು.  2024 ರಲ್ಲಿ ಕರೆದ ರೋಗಿಗಳ ಹಾಸಿಗೆ ಟೆಂಡರ್ ನಲ್ಲಿ(Tender)  ಅಂಕೋಲಾದ ಗುತ್ತಿಗೆದಾರ ಮೌಸಿನ್ ಅಹಮದ್ ಎಂಬುವವರು ಭಾಗವಹಿಸಿ ಪಡೆದಿದ್ದರು. ಸುಮಾರು 3,30,700 ರೂ. ಬಿಲ್ ಮಂಜೂರಿ ಮಾಡಲು ಜಿಲ್ಲಾ ಸರ್ಜನ್ ಡಾ ಶಿವಾನಂದ ಕುಡ್ತಲಕರ್ ಗುತ್ತಿಗೆದಾರನಿಂದ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. 

ನಿನ್ಬೆ ರಾತ್ರಿ 20,000 ಹಣ ಪಡೆದಿದ್ದ ಜಿಲ್ಲಾ ಸರ್ಜನ್(District Surgeon) ಕುಡ್ತಲಕರ್, ಇಂದು  ಮತ್ತೆ 30,000 ರೂಪಾಯಿ ಪಡೆಯುವ ವೇಳೆ ಲೋಕಾಯುಕ್ತ ಎಸ್ಪಿ ಕುಮಾರಚಂದ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಧನ್ಯಾ ನಾಯಕ ನೇತೃತ್ವದಲ್ಲಿ  ದಾಳಿ ನಡೆಸಿದ್ದಾರೆ. ಕಾರವಾರ ಲೋಕಾಯುಕ್ತ (Karwar Lokayukta) ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಈ ಹಿಂದೆಯೂ ಕೂಡ ಟೆಂಡರ್ ವೇಳೆ ಇಲ್ಲಿನ ಅಧಿಕಾರಿಗಳ ಮೇಲೆ ಭೃಷ್ಟಾಚಾರದ ವಾಸನೆ ಹರಡಿದೆ. ಇದೀಗ ಜಿಲ್ಲಾ ಸರ್ಜನ್ ಡಾ ಶಿವಾನಂದ ಕುಡ್ತಲಕರ್ ಅವರನ್ನ ಲೋಕಾಯುಕ್ತ ಪೊಲೀಸರು ‌ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಮುರ್ಡೇಶ್ವರದಲ್ಲಿ ದೋಣಿ ದುರಂತ. ಓರ್ವ ಸಾವು, ಇನ್ನೋರ್ವ ನಾಪತ್ತೆ

ಒಂದು ದಿನ ಕೆಲಸ ಮಾಡಿಲ್ಲ. 35 ಲಕ್ಷ ರೂ. ವೇತನ ಪಡೆದ ಕಾನಸ್ಟೇಬಲ್.