ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಮದುವೆಯಾಗಲಿಲ್ಲ ಎಂದು ನೊಂದ  ಯುವಕನೋರ್ವ  ಚಾಕುವಿನಿಂದ  ಇರಿದುಕೊಂಡು(Stabbing) ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬೆಳಿಗ್ಗೆ ಕಾರವಾರದಲ್ಲಿ  ನಡೆದಿದೆ.

ನಗರದ ಮಾರುತಿ ಗಲ್ಲಿಯ(Maruti galli) ನಿವಾಸಿ ಪ್ರಜ್ಞೇಶ್ ಪ್ರಕಾಶ ಶೇಟ್ (45) ಆತ್ಮಹತ್ಯೆಗೆ ಯತ್ನಿಸಿದವ. ಮನೆಯಲ್ಲಿಯೆ  ಚಾಕುವಿನಿಂದ ತನ್ನ ದೇಹದ ಭಾಗಕ್ಕೆ ಇರಿದುಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಪ್ರಜ್ಞೇಶ್ ಅವರನ್ನು ತಕ್ಷಣ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ(District Government Hospital) ದಾಖಲಿಸಲಾಗಿದೆ. ಚಿಕಿತ್ಸೆ ಪಡೆದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ.

ತನಗೆ 45 ವರ್ಷ ಆದರೂ ಇನ್ನೂ ಕೂಡ ಮದುವೆಯಾಗಿಲ್ಲ (No marriage) ಎಂಬ ವಿಷಯವನ್ನು ಪ್ರಜ್ಞೇಶ್ ಹತ್ತಿರದವರಿಗೆ ಹಲವು ಬಾರಿ ಹೇಳಿಕೊಂಡು ಬೇಸರಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ   ಖಿನ್ನತೆ ಹಿನ್ನೆಲೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಾರವಾರ ನಗರ ಠಾಣಾ(Karwar Town Station) ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.

ಇದನ್ನು ಓದಿ : ಮುರ್ಡೇಶ್ವರದಲ್ಲಿ ಮಂಗಳಮುಖಿಯರ ದೌರ್ಜನ್ಯ. ಬೈಕ್ ಸವಾರನ ಸರ ಕಿತ್ತು ಪರಾರಿ.

ವಿದ್ಯುತ್ ಶಾಕ್ ಗೆ ಜೋಡಿಯಾನೆ ಬಲಿ. ಜಮೀನು ಮಾಲೀಕನ ಮೇಲೆ ಪ್ರಕರಣ.

ಸಿಗ್ನಲ್ ಮೀರಿ ಬಂದ ಅಂಬುಲೆನ್ಸ್. ಭಟ್ಕಳದ ದಂಪತಿ ದುರ್ಮರಣ. ಮಕ್ಕಳು ಅನಾಥ.