ಇ ಸಮಾಚಾರ ಡಿಜಿಟಲ್ನ್ಯೂಸ್ (esamachara digital news) ಉಡುಪಿ(Udupi) : ಸಾಮಾನ್ಯವಾಗಿ ಮೀನು(Fish) ನೀರಿನಿಂದ ಮೇಲಕ್ಕೆ  ಬಂದರೆ ಅದು ಸಾಯುತ್ತವೆ. ಆದರೆ ಕತ್ತರಿಸಿದ ಬಳಿಕವೂ ಬಂಗುಡೆ ಮೀನೊಂದು(Bangda Fish) ಜೀವಂತವಾಗಿದ್ದ ಅಪರೂಪದ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ(Malpe Bunder) ನಡೆದಿದೆ.

ಗ್ರಾಹಕರೊಬ್ಬರು ಮಹಿಳೆಯೊಬ್ಬರಿಂದ  ಬಂಗುಡೆ ಮೀನು(Bangda Fish) ಖರೀದಿಸಿ ನಂತರ  ಅದನ್ನು ಕತ್ತರಿಸಿ ಕೊಡುವಂತೆ ಹೇಳಿದ್ದಾರೆ. ಆಗ ಮಹಿಳೆ ಮೀನನ್ನು ಕತ್ತರಿಸಿ ಟಬ್ ಗೆ ಹಾಕಿದ್ದಾರೆ. ಆದರೆ ಪವಾಡವೋ ಎನೋ ಗೊತ್ತಿಲ್ಲ, ಕತ್ತರಿಸಿದ  ಮೀನಿನ ತುಂಡು  ಜೀವಂತವಾಗಿ ಒದ್ದಾಡುತ್ತಿತ್ತು.

ಈ ಜೀವಂತ ಮೀನನ್ನು ಕಂಡು ಬಂದರಿನಲ್ಲಿದ್ದವರು ನಿಬ್ಬೆರಗಾಗಿದ್ದಾರೆ. ಅಲ್ಲದೇ ತಮ್ಮ ಮೊಬೈಲ್ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ವಿಡಿಯೋ  ವೈರಲ್  ಆಗುತ್ತಿದೆ.

ಇದನ್ನು ಓದಿ : ಗೋಕರ್ಣದ ಮುಖ್ಯ ಕಡಲತೀರದಲ್ಲಿ ಮೂವರು ಪ್ರವಾಸಿಗರ ರಕ್ಷಣೆ