ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಕಬ್ಬಿಣದ ಅದಿರು(Iron ore) ಸಾಗಾಟ ಮತ್ತು ಹಣ ವರ್ಗಾವಣೆ(Money Laundaring) ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್(MLA Satish Sail) ಅವರಿಗೆ ಕರ್ನಾಟಕ ಹೈಕೋರ್ಟ್(Katnataka Highcourt) ತಾತ್ಕಾಲಿಕ ರಿಲೀಪ್ ನೀಡಿದೆ.
ಸತೀಶ್ ಸೈಲ್ ಅವರಿಗೆ ನೀಡಿದ್ದ ಮಧ್ಯಂತರ ವೈದ್ಯಕೀಯ ಜಾಮೀನು(Medical Bail) ಅವಧಿಯನ್ನು ನವೆಂಬರ್ 20ರವರೆಗೆ ವಿಸ್ತರಿಸಿದೆ. ಅಲ್ಲದೇ ಶಾಸಕರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲು ಅರ್ಹ ವೈದ್ಯರ ಹೆಸರನ್ನು ಸೂಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ)(Enforcement Department) ನ್ಯಾಯಾಲಯವು ಸೂಚಿಸಿದೆ.
ಪ್ರಕರಣ ಎದುರಿಸುತ್ತಿರುವ ಶಾಸಕ ಸತೀಶ್ ಸೈಲ್(MLA Satish Sail) ಅವರು ತಮ್ಮ ವೈದ್ಯಕೀಯ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದು ಹಿಂದಿನ ದಿನಗಳಲ್ಲಿ ವಿಶೇಷ ನ್ಯಾಯಾಲಯವು ಸತೀಶ್ ಸೈಲ್ ಅವರ ವೈದ್ಯಕೀಯ ಜಾಮೀನನ್ನು ರದ್ದುಗೊಳಿಸಿ, ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಕಾರಣವಾಗಿ “ಶಾಸಕರು ತನಿಖೆಗೆ ಸಹಕರಿಸುತ್ತಿಲ್ಲ” ಹಾಗೂ “ವೈದ್ಯಕೀಯ ಚಿಕಿತ್ಸೆಗಾಗಿ ನೀಡಿದ ನಿಯಮ ಪಾಲನೆ ಇಲ್ಲ” ಎಂಬುದನ್ನು ಉಲ್ಲೇಖಿಸಲಾಗಿತ್ತು.
ಈ ನಿರ್ಧಾರವನ್ನು ಪ್ರಶ್ನಿಸಿ ಸೈಲ್ ಅವರು ಹೈಕೋರ್ಟ್ಗೆ ಮೇಲ್ಮನವಿ(Appeal) ಸಲ್ಲಿಸಿದ್ದರು. ಆಗ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಲಾಗಿದ್ದು, ಅಂದಿನವರೆಗೂ ಮಧ್ಯಂತರ ಜಾಮೀನು ಮುಂದುವರಿಸಲು ನ್ಯಾಯಾಲಯ ಅನುಮತಿಸಿತ್ತು. ಇದೀಗ ಮತ್ತೊಂದು ವಾರ ಅವಧಿಗೆ ಜಾಮೀನು ವಿಸ್ತರಿಸುವ ಮೂಲಕ ಸೈಲ್ ಅವರಿಗೆ ತಾತ್ಕಾಲಿಕವಾಗಿ ತಲೆ ನೋವು ಕಡಿಮೆಯಾದಂತಾಗಿದೆ.
ಇದನ್ನು ಓದಿ : ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹೆಸ್ಕಾಂ ಅಧಿಕಾರಿ ನೇಣಿಗೆ ಶರಣು
ಗ್ರಾಹಕರಿಗೆ ವಂಚಿಸಿದ ವಂಚಕರು ಪೊಲೀಸರ ಬಲೆಗೆ. ಭಟ್ಕಳದಲ್ಲಿ ಮೂವರಿಗೆ ಡ್ರಿಲ್.
ಬ್ಯಾಂಕ್ ದರೋಡೆಗೆ ಯತ್ನ. ಸೈರನ್ ಕೂಗುತ್ತಿದ್ದಂತೆ ಕಾಲ್ಕಿತ್ತ ದರೋಡೆಕೋರರು.

