ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news)ಶಿವಮೊಗ್ಗ(Shivamogga) : ಸೋಗಾನೆ ಬಳಿಯಿರುವ ಕೇಂದ್ರ ಕಾರಾಗೃಹದ ಖೈದಿಗಳಿಗೆ(Central Jail Prisoners) ಅಕ್ರಮವಾಗಿ ಗಾಂಜಾ, ಸಿಗರೇಟ್ ಹಾಗೂ ಮೊಬೈಲ್ ಪೂರೈಕೆ(Mobile Supply) ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ತುಂಗಾನಗರ ಪೊಲೀಸರು(Tunganagara Police) ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಿಪ್ಪುನಗರದ ಇಮ್ರಾನ್ ಪಾಷಾ @ ಇಮ್ಮು (25), ಸೈಯ್ಯದ್ ಮಲ್ಲಿಕ್ @ ತಬ್ರೇಜ್ (22) ಹಾಗೂ ಅಂಬೇಡ್ಕರ್ ನಗರದ ಅಲ್ಲಾ ಬಕಶ್ @ ಪೊಟ್ಯಾಟೋ (20) ಎಂದು ಗುರುತಿಸಲಾಗಿದೆ.

ಆರೋಪಿಗಳು ಜೈಲಿನ ಕಾಂಪೌಂಡ್ ಗೋಡೆಯ ಬಳಿ ಟೇಪ್ ಸುತ್ತಿ ಮೊಬೈಲ್, ಗಾಂಜಾ, ಬೀಡಿ ಹಾಗೂ ಸಿಗರೇಟ್‌ಗಳನ್ನು ಒಳಗೆ ಎಸೆದು ಖೈದಿಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಶಿವಮೊಗ್ಗ ಕೇಂದ್ರ ಕಾರಾಗೃಹದ(Shivamogga Central Jail) ಸೂಪರಿಂಟೆಂಡೆಂಟ್ ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತುಂಗಾನಗರ ಪೊಲೀಸರು ವಿಶೇಷ ಕಾರ್ಯಾಚರಣೆ(Special Operations) ನಡೆಸಿದ್ದರು.

ಜೈಲು ಆವರಣದಲ್ಲಿ(Jail Compound) ಪರಿಶೀಲನೆ ನಡೆಸಿದ ವೇಳೆ ಒಂದು ಮೊಬೈಲ್ ಫೋನ್, ಮೂರು ಕಟ್ಟು ಬೀಡಿ, ಮೂರು ಸಿಗರೇಟ್ ಪ್ಯಾಕ್‌ಗಳು ಹಾಗೂ ಚಾರ್ಜಿಂಗ್ ಕೇಬಲ್ ಪತ್ತೆಯಾಗಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತುಂಗಾನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಬಿಜೆಪಿ ಮುಖಂಡನ ಹತ್ಯೆಗೆ ಸಂಚು ಪ್ರಕರಣ. ಕೊಲೆ ಮಾಡಲು ಬಂದ ಗುಂಪಿನವನೇ ಫಿನಿಶ್ ಆದ ಕಥೆ.

ರೀಲ್ಸ್ ರಾಣಿ ಸಹವಾಸ. ಜ್ಯೋತಿಷ್ಯ ಹೇಳುವವ ಜೈಲುವಾಸ.

ಭಟ್ಕಳ ಆಟೋ ಚಾಲಕನ ಮಾನವೀಯತೆ. ಬಂಗಾರವಿದ್ದ ಬ್ಯಾಗ್ ಮರಳಿ ಪ್ರಯಾಣಿಕರಿಗೆ.