ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ಶಹರದ ಹೂವಿನ ಚೌಕ ಹತ್ತಿರವಿರುವ ದುಬೈ ಮಾರ್ಕೆಟ್ ಲ್ಲಿ(Dubai Market) ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್(Electronic Cigaret) ಮತ್ತು ನಿಕೋಟಿನ್ ವ್ಯಾಪ್ಸ್ (Vapes)ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ‌ಬಂಧಿಸಿದ್ದಾರೆ.

ಸಿದ್ದಿಕ್ ಅಬ್ದುಲ್ ರೆಹಮಾನ್  ಮಸ್ತಾನ್ ಸಿದ್ದಿಕ್ ಖಾದಿರ ಮೀರಾ(58) ಬಂಧಿತ ಆರೋಪಿಯಾಗಿದ್ದಾನೆ. ಈತನ‌ ಅಂಗಡಿಯಲ್ಲಿ ಸುಮಾರು 1,38,500 ರೂಪಾಯಿ ಮೌಲ್ಯದ ನಿಷೇಧಿತ ವಸ್ತುಗಳನ್ನು ‌ವಶಕ್ಕೆ ಪಡೆದುಕೊಳ್ಳಲಾಗಿದೆ. ಗುರುವಾರ ರಾತ್ರಿ 22-30 ಗಂಟೆಯ ಸಮಯಕ್ಕೆ ಭಟ್ಕಳ ಶಹರದ(Bhatkal Town) ಹೂವಿನ ಚೌಕ್ ದುಬೈ ಮಾರ್ಕೆಟದಲ್ಲಿರುವ(Flower Chowk Dubai Market) ತನ್ನ ಅಂಗಡಿಯಲ್ಲಿ ನಿಷೇಧಿತ ವಸ್ತುಗಳಾದ ಒಟ್ಟು 76,000= ರೂ ಮೌಲ್ಯದ ಇಲೇಕ್ಟ್ರಾನಿಕ್ ಸಿಗರೇಟ್ಗಳು ಒಟ್ಟು – 38 ಮತ್ತು  62,500=00 ರೂ ಮೌಲ್ಯದ ಇಲೇಕ್ಟ್ರಾನಿಕ್  ಸಿಗರೇಟಿಗೆ ತುಂಬುವ ನಿಕೋಟಿನ್ ಲಿಕ್ವಿಡ್ ರಿಪಿಲ್ಗಳು (Vapes) ಒಟ್ಟು- 125 ಇವುಗಳನ್ನು ಮಾರಾಟ ಮಾಡಲು ಯಾವುದೇ ಪರವಾನಿಗೆ ಹೊಂದದೇ ಮಾರಾಟ ಮಾಡುತ್ತಿದ್ದ. ದಾಳಿಯ ವೇಳೆ ನಿಷೇಧಿತ ವಸ್ತುಗಳನ್ನು ಪೊಲೀಸರು‌ ಜಪ್ತಿ ಮಾಡಿದ್ದಾರೆ.

ಭಟ್ಕಳ ಸಿಪಿಐ ದಿವಾಕರ ಅವರ  ನೇತ್ರತ್ವದಲ್ಲಿ ಪಿಎಸ್ಐ ನವೀನ ನಾಯ್ಕ, ಸಿಬ್ನಂದಿಗಳಾದ ಉದಯ ನಾಯ್ಕ, ದೀಪಕ ನಾಯ್ಕ,  ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ,  ಸುರೇಶ ಮರಾಠಿ, ಜಗದೀಶ ನಾಯ್ಕ ಮತ್ತು  ರೇವಣಸಿದ್ದಪ್ಪ ಮಾಗಿ   ಕಾರ್ಯಾಚರಣೆ ನಡೆಸಿದ್ದರು. ಭಟ್ಕಳ ಶಹರ ಠಾಣೆಯಲ್ಲಿ(Bhatkal Town Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

ಇದನ್ನು ಓದಿ ‌:ಸೈಬರ್ ವಂಚಕರ ಕಪಿ ಮುಷ್ಠಿಗೆ ಸಿಲುಕಿದ ನಿವೃತ್ತ ಶಿಕ್ಷಕ. ಬರೋಬ್ಬರಿ‌ 1.61 ಕೋಟಿ ರೂ. ವಂಚನೆ.

*