ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಬಡ ಪಿಗ್ಮಿ ಸಂಗ್ರಹಕಾರರ ಬಿ.ಪಿ.ಎಲ್ ಪಡಿತರ ಕಾರ್ಡನ್ನು(BPL Ration Card) ರದ್ದು ಮಾಡದಂತೆ ಕೋರಿ  ಪಿಗ್ಮಿ ಸಂಗ್ರಹಕಾರರು(Pigmy Collectors) ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

  ಕೆಲವು ಪಿಗ್ಮಿ  ಸಂಗ್ರಹಕಾರರು ಪದವಿ, ಮಾಸ್ಟರ್ ಡಿಗ್ರಿಯನ್ನು ಹೊಂದಿದ್ದರೂ ಸೂಕ್ತ ಉದ್ಯೋಗ ಸಿಗದೇ  ಜೀವನೋಪಾಯಕ್ಕಾಗಿ  ಪಿಗ್ಮಿ ಸಂಗ್ರಹಣೆಯನ್ನು ಮಾಡುತ್ತಿದ್ದಾರೆ. ಕಳೆದ 25-30 ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದರೂ ಬ್ಯಾಂಕುಗಳು ನಮಗೆ ವೇತನವನ್ನು ನೀಡುವುದಿಲ್ಲ. ನಾವು ಸಂಗ್ರಹಿಸಿದ ಹಣದ ಮೇಲೆ ನಮಗೆ ಕಮಿಷನ್ ಮಾತ್ರ ನೀಡುತ್ತದೆ. ಪಿಗ್ಮಿ  ಸಂಗ್ರಹಣೆ ಮಾಡುವಾಗ ಮಳೆ, ಗುಡುಗು, ಸಿಡಿಲು ಏನೇ ಬಂದರೂ ಹೊಟ್ಟೆ ಪಾಡಿಗಾಗಿ ನಾವು ಈ ಕೆಲಸ  ಮಾಡುತ್ತಾ ಬಂದಿದ್ದೇವೆ. ಒಂದು ವೇಳೆ ಅನಾರೋಗ್ಯ ಉಂಟಾಗಿ ಒಂದು ಅಥವಾ ಎರಡು ದಿನ ಪಿಗ್ಮಿ ಸಂಗ್ರಹಣೆ ಮಾಡದೇ ಇದ್ದರೆ ಆ ದಿನ ನಮಗೆ ಯಾವುದೇ ರೀತಿಯ ವೇತನ ಇರುವುದಿಲ್ಲ. ನಮ್ಮ ಕುಟುಂಬ ಆ ದಿನ ಉಪವಾಸ ಇರಬೇಕಾದ ಸಂದರ್ಭವೂ ಇದೆ.

ವಯಸ್ಸಾದ ತಂದೆ ತಾಯಿಗಳು ಮತ್ತು ಚಿಕ್ಕ ಚಿಕ್ಕ ಮಕ್ಕಳು ಇದ್ದು ಅವರಿಗೆ ಅನಾರೋಗ್ಯದ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್(BPL Card) ಇರುವುದರಿಂದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತಿತ್ತು. ಈಗ ನೀವು ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ನಮಗೆ ಬ್ಯಾಂಕಿನಿಂದ ಯಾವುದೇ ರೀತಿಯ ಪಿ.ಎಫ್. ಗ್ರಾಜ್ಯುಟಿ, ವೇತನ ಹೀಗೆ ಯಾವುದೇ ರೀತಿಯ ಸೌಲಭ್ಯವೂ ಇರುವುದಿಲ್ಲ. ನಾವು ಕಷ್ಟಪಟ್ಟು 20 ರಿಂದ 30 ಕೀ.ಮೀ ಹೋಗಿ ಹಣ ಸಂಗ್ರಹಿಸಿ ಅದನ್ನು ಬ್ಯಾಂಕಿಗೆ ತುಂಬಿ ಆ ಹಣದ ಕಮಿಷನ್ ಮಾತ್ರ ನಮಗೆ ಬ್ಯಾಂಕ್ ನೀಡುತ್ತದೆ. ಆದರೆ ನಮಗೆ ಸಿಗುವ ಕಮಿಷನ್ ನಮ್ಮ ಸಂಸಾರವನ್ನು ನಡೆಸುವುದೇ ಕಷ್ಟ ಆಗಿದೆ. ಹೀಗಿದ್ದಾಗ ತಾವು ಬಡ ಪಿಗ್ಮಿ ಏಜೆಂಟರ್ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನಮ್ಮ ಸಂಸಾರ ದಾರಿ ಮೇಲೆ ಬರುತ್ತದೆ. ಹಾಗೂ ದಯವಿಟ್ಟು ಮಾನವೀಯ ನೆಲೆಯಿಂದ ಪಿಗ್ಗಿ ಏಜೆಂಟರ್ ಬಿಪಿಎಲ್ ಕಾರ್ಡ್ ರದ್ದು ಮಾಡಬಾರದೆಂದು ವಿನಂತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪಿಗ್ಮಿ ಸಂಗ್ರಾಹಕರರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ ಮಂಕಿ,  ಅಧ್ಯಕ್ಷ ಜುಜೆ ಫರ್ನಾಂಡಿಸ್, ಉಪಾಧ್ಯಕ್ಷ ಉದಯ ನಾಯ್ಕ, ಏಜಂಟರಾದ ರಾಘವೇಂದ್ರ  ನಾಯ್ಕ, ಗಣಪತಿ ನಾಯ್ಕ, ಸತೀಶ್ ನಾಯ್ಕ ಮಾಳ್ಕೋಡ,  ರಾಮಕೃಷ್ಣ  ಶೆಟ್ಟಿ, ಶೇಖರ್ ನಾಯ್ಕ,  ಗಣಪಯ್ಯ ಗೌಡ, ಗಜಾನನ ನಾಯ್ಕ, ರಾಜೇಶ್ ಪ್ರಭು,  ಶ್ಯಾಮಲಾ ಶೆಟ್ಟಿ, ನಾಗರಾಜ್ ನಾಯ್ಕ,  ಕೃಷ್ಣ ಶೆಟ್ಟಿ, ಗಿರೀಶ್ ನಾಯ್ಕ, ಶ್ರೀಧರ ನಾಯ್ಕ, ಈಶ್ವರ ನಾಯ್ಕ ಇತರ ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು.

ಇದನ್ನು ಓದಿ : ಸಿಡಿಲಿನ ಆರ್ಭಟಕ್ಕೆ  ಕುಮಟಾ ಆಡಳಿತ ಸೌಧಕ್ಕೆ  ಹಾನಿ.

ಆರ್ ಟಿ ಓ ಮನೆ ಮತ್ತು ಮಳಿಗೆಯ ಮೇಲೆ ದಾಳಿ. ಲೋಕಾಯುಕ್ತರಿಂದ ರಾತ್ರಿವರೆಗೂ ನಡೆದ ಪರಿಶೀಲನೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳ ಮಂಡ್ಯದಲ್ಲಿ ಆರೆಸ್ಟ್.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದಿದ್ದರೆ ರಾಜಕೀಯ ನಿವೃತ್ತಿ: ಶಾಸಕ ಸತೀಶ್ ಸೈಲ್