ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಭಾರತೀಯ ಹವಮಾನ ಇಲಾಖೆ ಉತ್ತರಕನ್ನಡ ಜಿಲ್ಲೆಯಲ್ಲಿ ಜುಲೈ ಮೂರರಿಂದ  ಆರೆಂಜ್  ಅಲರ್ಟ್ ಸೂಚನೆ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಬಾರೀ ಮಳೆಯಾಗುತ್ತಿದೆ. ಹೀಗಾಗಿ ಅಧಿಕ ಮಳೆ ಸುರಿಯುತ್ತಿರುವ ಜೋಯಿಡಾ ಮತ್ತು  ದಾಂಡೇಲಿಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜುಲೈ ಮೂರರಂದು ರಜೆ (Holiday) ಘೋಷಿಸಲಾಗಿದೆ.

ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ   ಜೋಯಿಡಾ(Joida) ಮತ್ತು ದಾಂಡೇಲಿ(Dandeli) ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಿಗೆ ರಜೆ ನೀಡಲಾಗಿದೆ.  ಅನಾನುಕೂಲ ಹಾಗೂ ಅವಘಡಗಳು ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೇಲಿನ ತಾಲೂಕುಗಳಿಗೆ   ಮಾತ್ರ ರಜೆ ಘೋಷಿಸಿ (Holiday Declared) ಆದೇಶ ಮಾಡಲಾಗಿದೆ.

ಆದೇಶವನ್ನು, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರವಾರ, ಶಿರಸಿ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ  ರವರು ಕಾರ್ಯ ರೂಪಕ್ಕೆ ತರುವಂತೆ ತಿಳಿಸಲಾಗಿದೆ. ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ಕಡಲೆ ಬೀಜ ತಂದ ಆಪತ್ತು. ಉಬ್ಬಸ ಸಮಸ್ಯೆಯಿಂದ ಮುಕ್ತಿ ಪಡೆದ ರೋಗಿ.

ಲಿವ್ ಇನ್ ಸಂಗಾತಿ *ತ್ಯೆ ಮಾಡಿದ ಯುವಕ ಮಾಡಿದ್ದೇನು ಗೊತ್ತಾ.*