ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಜ್ಯದ ಕರಾವಳಿಯ ಮೀನುಗಾರರು ಬೆಚ್ಚಿ ಬಿದ್ದಿದ್ದಾರೆ. ಕಾಂಡೆ ಜಾತಿಯ ಮೀನೊಂದು ಯುವಕನ ಪ್ರಾಣ ತೆಗೆದಿರೋದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಮೊದಲ ಬಾರೀಗೆ ಮೀನೊಂದು ಈ ರೀತಿಯಾಗಿ ಕಂಠಕವಾಗಿರುವುದು ಮೀನುಗಾರ ಸಮುದಾಯದವರನ್ನ ಬೆಚ್ಚಿಬೀಳಿಸಿದೆ.
ಹೌದು. ಸಮುದ್ರದ ಗರ್ಭದಲ್ಲಿ ಅಸಂಖ್ಯಾತವಾಗಿರುವ ಮೀನುಗಳಿವೆ. ಅದರಲ್ಲಿ ಅಪಾಯಕಾರಿಯೂ(Dangerous), ವಿಷಕಾರಿಯೂ(Poisoning) ಆಗಿರುವ ಮೀನುಗಳು ಹಲವು ಜಾತಿಯದ್ದಿವೆ. ಕಾರವಾರದ ದೇವಗಢ ಲೈಟ್ ಹೌಸ್(Devaghad Lighthouse) ಸಮೀಪ ಮೀನುಗಾರಿಕೆ ನಡೆಸುತ್ತಿರುವ ವೇಳೆ 24 ರ ಹರೆಯದ ಯುವಕ ಅಕ್ಷಯ ಎಂಬಾತನ ಜೀವ ತೆಗೆದಿರೊದು ಕಾಂಡೆ ಜಾತಿಯ ಮೀನು(Needle Fish). ಇದಕ್ಕೆ ನಿಡಲ್ ಫಿಶ್ ಎಂದು ಕರೆಯುತ್ತಾರೆ.
ಗುಂಪುಗುಂಪಾಗಿ ಇರುವ ಈ ಜಾತಿಯ ಕಾಂಡೆ ಮೀನು(ಕಾರವಾರದಲ್ಲಿ ತೋಳೆ ಮೀನೆಂದು ಕರೆಯುವರು)ಗಳು ಸಮುದ್ರದ ಮೇಲ್ಪಟ್ಟದಿಂದ ಕೇವಲ ಒಂದು ಮೀಟರ್ ಒಳಗೆ ಜೀವಿಸುತ್ತವೆ. ಆದ್ರೆ ಅವುಗಳಿಗೆ ಶಬ್ದ ಕೇಳಿಸಿದಾಗ ವೇಗವಾಗಿ ಓಡುವ ಚಾಳಿ. ತಮ್ಮ ಪ್ರಾಣ ರಕ್ಷಣೆಯ ಜೊತೆಗೆ ದಾಳಿ ಮಾಡುವ ಚಾಳಿ ಇದೆ ಎಂದು ಕಡಲಶಾಸ್ತ್ರಜ್ಞರ ಅಂಬೋಣ. ಇಂಥ ಮೀನಿನ ಮೇಲ್ಬಾಗದಲ್ಲೂ ಕೂಡ ಚಿಕ್ಕಚಿಕ್ಕ ಹಲ್ಲುಗಳಿರುತ್ತವೆ. ಒಂದು ವೇಳೆ ಯಾವುದೇ ಮೀನುಗಳಿಗೆ ಅವುಗಳ ಚೂಂಚು ತಾಗಿದರೇ ಅಪಾಯ ಫಿಕ್ಸ್ ಅಂದೆ ಅರ್ಥ.
ಒಂದು ವೇಳೆ ಮನುಷ್ಯನಿಗೇನಾದ್ರೂ ಈ ಮೀನು ಚುಚ್ಚಿದರೇ ಹೊಕ್ಕಿದ ಭಾಗವೇ ಹರಿದು ಹೋಗಿ ತೀವೃ ರಕ್ತಸ್ರಾವವಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಕಾರವಾರ ತಾಲೂಕಿನ ಮಾಜಾಳಿಯ ದಾಂಡೇಭಾಗದ ಯುವಕ ಕೂಡ ಇದೇ ರೀತಿಯಾಗಿ ಮೀನಿನಿಂದ ಸಾವನ್ನಪ್ಪಿರೋದು ದುರಂತ. ಆತನ ಸಾವಿನಿಂದ ಮೀನುಗಾರಿಕಾ ವಲಯದಲ್ಲಿ ಕೆಲಸ ಮಾಡುವವರನ್ನ ಕಂಗೆಡಿಸಿದೆ.
ಸುಮಾರು 20 ವರ್ಷಗಳ ಹಿಂದೆ ಅಂಕೋಲಾ ತಾಲೂಕಿನ ಕೇಣಿಯಲ್ಲಿ(Ankola Keni) ಇದೇ ರೀತಿಯ ಮೀನೊಂದು ಮೀನುಗಾರನ್ನ ಪ್ರಾಣ ಕಸಿದಿತ್ತು. ಆಗ ಹೊಟ್ಟೆಯ ಭಾಗದಿಂದ ಹೊಕ್ಕಿ ಬೆನ್ನಿನ ಹಿಂಬದಿಯವರೆಗೂ ಮೀನಿನ ಚೊಂಚು ಹೊಕ್ಕಿ ಅಪಾಯ ಉಂಟಾಗಿತ್ತು. ಕಾಂಡೇ ಜಾತಿಯ ಮೀನುಗಳು ವೇಗ ಹೇಗಂದ್ರೆ ಬಿಟ್ಟಬಾಣ ಹೇಗೆ ಓಡುತ್ತೋ ಅದಕ್ಕಿಂತ ಹೆಚ್ಚು 50ರಿಂದ 60 ಕಿಲೋಮೀಟರ್ ವೇಗದಲ್ಲಿ ಹಾರುತ್ತವೆಯಂತೆ. ಇದು ಬಿಲ್ಡಿಂಗ್ ನಿಂದ ಇನ್ನೊಂದು ಬಿಲ್ಡಿಂಗ್ ಗೆ ಜಿಗಿದ ಹಾಗೆ ಇರುತ್ತಂತೆ ಕಡಲಶಾಸ್ತ್ರಜ್ನರಾದ ಡಾ ಶಿವಕುಮಾರ ಹರಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ತರನಾದ ಸ್ವಾಡ್ ಫಿಶ್(ಮರ್ಲಿನ್ ಮೀನು), ಸೆಲ್ ಫಿಶ್ (ಹಾಯಿ ಮೀನು)ಗಳು ಮೀನುಗಾರರಿಗೆ ಆತಂಕ ಒಡ್ಡುವ ಮೀನುಗಳು. ಹಾಯಿ ಮೀನುಗಳು ಹಾಯಿ ದೋಣಿ ಆಕಾರದಲ್ಲಿರುತ್ತದೆ. ಇದು ಬಹಳ ಚೂಪಾಗಿರುತ್ತದೆ. ಮೀನಿನ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಹಲ್ಲಿರುತ್ತದೆ. ಆದ್ರೆ ಇವುಗಳು ಅಲ್ಲಲ್ಲಿ ಒಂದೊಂದಾಗಿ ಕಾಣಿಸುತ್ತದೆ.
ಇಡೀ ಜಗತ್ತಿನಲ್ಲಿ ಕಾಂಡೆ ಮೀನು ಚುಚ್ಚಿ ಮೃತಪಟ್ಟಿರುವುದು ಇದು 12ನೇ ಪ್ರಕರಣ. ದಾಖಲೆ ಪ್ರಕಾರ ಭಾರತದಲ್ಲಿ 4ನೇಯದ್ದಾದರೇ ಕರ್ನಾಟಕದಲ್ಲಿ ಇದು ಮೊದಲೆಂದು ಹೇಳಲಾಗಿದೆ. ಆದ್ರೆ ಕೆಲ ಕಡೆಗಳಲ್ಲಿ ಇಂಥ ಘಟನೆ ನಡೆದರೂ ದಾಖಲೆಯಲ್ಲಿ ಸೇರಿಲ್ಲವಾಗಿದೆ.
ಸಾಮಾನ್ಯವಾಗಿ ಕರಾವಳಿಯಲ್ಲಿ ಮೀನುಗಾರಿಕೆ(Coastal Fishing) ಇರುವುದು 25ರಿಂದ 50 ಮಾರು ಅಂತರದೊಳಗೆ ಮಾತ್ರ. ಮೀನುಗಳಿಗೆ ಆಹಾರ ಸಿಗೋದು ಈ ಅಂತರದಲ್ಲಿಯೇ. ಹೀಗಾಗಿ ಹೆಚ್ಚು ಹೆಚ್ಚಾಗಿ ಕರಾವಳಿ ತೀರ ಪ್ರದೇಶದಿಂದ 50 ಮಾರು ಅಂತರದೊಳಗೆ ಮೀನುಗಾರಿಕೆ ಇರುತ್ತದೆ. 50 ಮಾರು ದೂರದಲ್ಲಿ ನಡೆಯೋದು ಆಳ ಸಮುದ್ರ ಮೀನುಗಾರಿಕೆ. ಜೀವನ ನಿರ್ವಹಣೆಗಾಗಿ ಕಡಲಮಕ್ಕಳು ಸದಾ ಮೀನಿಗಾಗಿ ಹುಡುಕಾಟ ನಡೆಸುತ್ತಾರೆ. ನಡೆಸಬೇಕಾದ ಅನಿವಾರ್ಯತೆ ಇದೆ.

ಇದನ್ನು ಓದಿ : ಮೀನು ಹಿಡಿಯುವ ವೇಳೆ ಹಾರಿದ ಮೀನು. ಮೀನುಗಾರ ಯುವಕನ ದುರಂತ ಸಾವು.
ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ: ಅಪಪ್ರಚಾರ ನನ್ನ ಸ್ಫರ್ಧೆಯನ್ನು ಹತ್ತಿಕ್ಕುವ ಪ್ರಯತ್ನ: ಸರಸ್ವತಿ ಎನ್. ರವಿ