ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಅನುಮಾನಾಸ್ಪದವಾಗಿ ಪತ್ತೆಯಾದ ಸೀಗಲ್ ಹಕ್ಕಿಯ(Seagull Bird) ಬೆನ್ನಿಗೆ ಅಳವಡಿಸಿದ್ದ ಜಿಪಿಎಸ್ ಟ್ರಾಕರ್(GPS Tracker) ಮತ್ತು ಕಾಲಿನ ರಿಂಗ್(Leg Ring) ಪರಿಶೀಲನಾ ಕಾರ್ಯವನ್ನ ಪೊಲೀಸ್ ಇಲಾಖೆ(Police Ring) ಗಂಭೀರವಾಗಿ ತನಿಖೆಗೆ ಒಳಪಡಿಸಿದೆ.
ಡಿಸೆಂಬರ್ 16ರಂದು ಕಾರವಾರ ಕಡಲತೀರದಲ್ಲಿ(Karwar Beach) ನಿತ್ರಾಣ ಸ್ಥಿತಿಯಲ್ಲಿ ಸೈಬಿರಿಯಾದಿಂದ ಬಂದ ಸೀಗಲ್ ಬರ್ಡ್(Seagull Bird) ಪತ್ತೆಯಾಗಿದ್ದು, ಜಿಪಿಎಸ್ ಟ್ರಾಕರ್ ಹಾಗೂ ಸ್ಟೀಲ್ ರಿಂಗ್ ಅಳವಡಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಸೂಕ್ಷ್ಮ ಪ್ರದೇಶಗಳ(Sensitive Place) ಬಗ್ಹೆ ಬೇಹುಗಾರಿಕೆ ನಡೆಸುತ್ತಿರಬಹುದು ಎಂಬ ಸಂಶಯ ಹೆಚ್ಚಾಗಿತ್ತು.
ಹೀಗಾಗಿ ಪೊಲೀಸ್ ಇಲಾಖೆ ತನಿಖೆಯನ್ನು(Police Department Investigation) ಮುಂದುವರಿಸಿದೆ. ಪತ್ತೆಯಾದ ಎಲೆಕ್ಟ್ರಾನಿಕ್ ಡಿವೈಸ್(Electronic Device) ಅನ್ನು ಫಾರೆನ್ಸಿಕ್ ವಿಭಾಗಕ್ಕೆ(Forensics Department) ರವಾನೆ ಮಾಡಲಾಗಿದೆ. ಟ್ರಾಕರ್ ಉದ್ದೇಶ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಅದೇ ರೀತಿ ಗಾಯಗೊಂಡ ಸೀಗಲ್ ಹಕ್ಕಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಾಳಿ ಹುಲಿ ಸಂರಕ್ಷಿತ ಅರಣ್ಯಕ್ಕೆ(Kali Tiger Reserve Forest) ಕಳುಹಿಸಲಾಗಿದೆ. ಅರಣ್ಯ ಇಲಾಖೆ ಮಾಹಿತಿ ಪ್ರಕಾರ, ಇದು ಸೈಬೀರಿಯನ್ ವಲಸೆ ಪಕ್ಷಿಯಾಗಿದ್ದು, ಅದರ ಚಲನವಲನ ಅಧ್ಯಯನಕ್ಕಾಗಿ(Movement Study) ಸಾಮಾನ್ಯವಾಗಿ ಕಾಲರ್ ಐಡಿ ಅಥವಾ ಟ್ರಾಕರ್ ಅಳವಡಿಸಲಾಗುತ್ತದೆ. ಪತ್ತೆಯಾದ ಜಿಪಿಎಸ್ ಟ್ರಾಕರ್ ಅನ್ನು ಚೈನಿಸ್ ಅಕಾಡೆಮಿ ಆಫ್ ಸೈನ್ಸಸ್ ರಿಸರ್ಚ್ ಸೆಂಟರ್ ಫಾರ್ ಇಕೋ ಎನ್ವೆರಮೆಂಟ್ ಸೈನ್ಸ್ ನವರು(Chainees Academy of Research to Eco Environment Science) ಅಳವಡಿಸಿದ್ದಾರೆಂಬುದು ಗೊತ್ತಾಗಿದೆ.
ಡಿವೈಸ್ ನಲ್ಲಿ ಇಮೇಲ್ ಐಡಿ ಇದ್ದು, ಪಕ್ಷಿ ಪತ್ತೆಯಾದಲ್ಲಿ ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಶ್ರೀಲಂಕಾದಲ್ಲಿ(Shrilanka) ಈ ಪಕ್ಷಿಗಳ ಕುರಿತು ಅಧ್ಯಯನ ಕಾರ್ಯಕ್ರಮ ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ.
ಆದರೆ ಪಕ್ಷಿಗೆ ಅಳವಡಿಸಿದ ಡಿವೈಸ್ ಬಗ್ಗೆ ಪೊಲೀಸ್ ಇಲಾಖೆ(Police Department) ಗಂಭೀರವಾಗಿ ತೆಗೆದುಕೊಂಡಿದ್ದು ಅಧ್ಯಯನ ಉದ್ದೇಶಕ್ಕಾಗಿ ಅಳವಡಿಸಿದ್ದಾರಾ ಅಥವಾ ಬೇರೆ ಕಾರಣಕ್ಕಾಗಿ ಬಳಸಿದ್ದಾರಾ ಎಂಬ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದ್ದಾರೆ. ಒಟ್ಟಾರೆಯಾಗಿ ಡಿವೈಸ್ ಬಗ್ಗೆ ಫಾರೆನ್ಸಿಕ್ ತಜ್ಞರು ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ಬಳಿಕ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ.
ಇದನ್ನು ಓದಿ : ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಚಿನ್ನದ ಸರ ಕಳ್ಳತನ.
ಬೆಳಕೆ ವೃದ್ದೆಯ ಚಿನ್ನದ ಸರ ಕದ್ದವ ಕುಖ್ಯಾತ ಆರೋಪಿ. ಇಬ್ಬರನ್ನ ಬಂಧಿಸಿದ ಪೊಲೀಸರು.
