ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವರು ರೈಲಿನಿಂದ ಕೆಳಗೆ ಬಿದ್ದು  ಮೃತಪಟ್ಟ ಘಟನೆ ತಾಲೂಕಿನ ಶಿರಾಲಿ ಗ್ರಾಮದ(Shirali Village) ಚಿತ್ರಾಪುರ ರೈಲ್ವೆ ನಿಲ್ದಾಣ(Chitrapur Railway Station) ಬಳಿ‌ ಸಂಭವಿಸಿದೆ.

ಬಾಬು ಪಾಂಡುರಂಗ ಪಡ್ತಿ (70) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.  ಮೃತರು ಕಾರವಾರ ತಾಲೂಕಿನ ಅಮದಳ್ಳಿ(Karwar Taluku Amadalli) ಟೋಲ್ ನಾಕಾ ಸಮೀಪದ ನಿವಾಸಿಯಾಗಿದ್ದಾರೆ.

ಅನಾರೋಗ್ಯಕ್ಕೊಳಗಾಗಿದ್ದ  ಬಾಬು ಪಡ್ತಿ ಅವರೊಂದಿಗೆ ಚಿಕಿತ್ಸೆಗಾಗಿ ಮಗ ಅಕ್ಷಯ ಅವರು  ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗಾಗಿ(Mangalore Father Muller Hospital) ಕಾರವಾರದಿಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್(Matsyagandha Express) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಶಿರಾಲಿ ಚಿತ್ರಾಪುರ ರೈಲ್ವೆ ನಿಲ್ದಾಣದ ಸಮೀಪ ತಲುಪಿದಾಗ ಬಾಬು ಪಡ್ತಿ ಶೌಚಾಲಯಕ್ಕೆ ತೆರಳಿದ್ದರು. ಬಳಿಕ ಬೋಗಿಯಲ್ಲಿ ಕೈ ತೊಳೆಯುವ ವೇಳೆ ಆಕಸ್ಮಿಕವಾಗಿ ಬಾಗಿಲು ತೆರೆದು ನಿಯಂತ್ರಣ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿ‌ ಸಾವನ್ನಪ್ಪಿದ್ದಾರೆ.

ಭಟ್ಕಳ  ಗ್ರಾಮೀಣ ಪೊಲೀಸ್  ಠಾಣೆಯಲ್ಲಿ(Bhatkal Rural Police Station) ಪ್ರಕರಣ ದಾಖಲಾಗಿದ್ದು‌ ತನಿಖೆ ನಡೆಸಲಾಗಿದೆ.

ಇದನ್ನು ಓದಿ : ಸಚಿವರ, ಮಹಿಳೆಯರ ಬಗ್ಗೆ ನಿರಂತರ ತೇಜೋವಧೆ. ಮಾಸ್ತಪ್ಪ ನಾಯ್ಕ ಅವರಿಗೆ ಕಠಿಣ ಉತ್ತರದ ಎಚ್ಚರಿಕೆ.

ಕುಂಭಮೇಳದ  ಮೋನಾಲಿಸಾ ಈಗ ಗೃಹಿಣಿ. ಅನ್ಯ ಕೋಮಿನ ಹುಡುಗನ ವಿವಾಹವಾದ ಹುಡುಗಿ.

ಗುಂಡಿಗೆ ಬಿದ್ದು ಮೇಲಕ್ಕೆ ಬಂದ ಆ್ಯಂಬುಲೆನ್ಸ್. ಹೋದ ಮಹಿಳೆಯ ಜೀವ ಮತ್ತೆ ಬಂದಿದ್ದು ಪವಾಡ.