ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಕನ್ನಡಪ್ರಭ ಪತ್ರಿಕೆಯ ಅರೆಕಾಲಿಕ ವರದಿಗಾರರಾಗಿದ್ದ ಗುರುಪ್ರಸಾದ ಹೆಗಡೆ(34) ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.

ಶಿರಸಿ ತಾಲ್ಲೂಕಿನ ಮಂಜುಗುಣಿಯ ತೋಟದಳ್ಳಿ ಗ್ರಾಮದ ನಿವಾಸಿಯಾಗಿದ್ದ ಗುರುಪ್ರಸಾದ ಶಿರಸಿಯಲ್ಲಿ ತಮ್ಮ ಪತ್ರಿಕಾ ವೃತ್ತಿ ಆರಂಭಿಸಿ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ 9 ವರ್ಷಗಳಿಂದ ಕಾರವಾರದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಪ್ರಸಾದ ಸದಾ ನಗುಮೊಗದ ಸ್ನೇಹಿತನಾಗಿ, ಎಲ್ಲರೊಂದಿಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು. ವರದಿಗಾರಿಕೆಯಲ್ಲಿ ವಸ್ತುನಿಷ್ಠ, ಪ್ರಾಮಾಣಿಕ, ನಿಷ್ಪಕ್ಷಪಾತತೆಯನ್ನು ಹೊಂದಿದ್ದ ಎಲ್ಲರ ನೆಚ್ಚಿನ `ಗುರು’ ನೇರ ನುಡಿಯಿಂದಲೇ ಎಲ್ಲರ ಪ್ರೀತಿಯನ್ನು ಗಳಿಸಿದ್ದರು.

ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಅವರು ಬನವಾಸಿಯ ಅವರ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕಾರವಾರ ಹಾಗೂ ಶಿರಸಿ ಪತ್ರಕರ್ತರ ಬಳಗ ಸಂತಾಪ‌ ಸೂಚಿಸಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು  ಕುಟುಂಬಕ್ಕೆ ನೀಡಲಿ  ಎಂದು ಮಾದ್ಯಮ ಬಳಗ ಶ್ರದ್ಧಾಂಜಲಿ‌ ಅರ್ಪಿಸಿದೆ.

ಇದನ್ನು ಓದಿ : ಬಾಲಕಿ ಪ್ರಾಣ ತೆಗೆದ ಜೋಕಾಲಿ. ಭಟ್ಕಳದ ತೆರ್ನಮಕ್ಕಿಯಲ್ಲಿ ಸಂಭವಿಸಿದ ಘಟನೆ.

ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಜಿಲ್ಲಾ ಸರ್ಜನ್   ಡಾ. ಶಿವಾನಂದ ಕುಡ್ತಲಕರ್ ಅಮಾನತ್ತು