ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಉತ್ತರಕನ್ನಡ ಜಿಲ್ಲೆಯ ಅಘನಾಶಿನಿ- ಬೇಡ್ತಿ ನದಿ(Aghanashini-Bedti River) ತಿರುವು ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ಕಂಡುಬಂದಿದೆ.
ಭಾನುವಾರ ಶಿರಸಿಯ ಎಂಇಎಸ್(Sirsi MES) ಮೈದಾನದಲ್ಲಿ ಬೃಹತ್ ಜನ ಸಮಾವೇಶ ನಡೆಸುವ ಮೂಲಕ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಯಿತು. ಶಿರಸಿಯ ಸೋಂದಾ ಸ್ವರ್ಣವಲ್ಲಿ(Sonda Swarnavalli) ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಾಯಿತು. ಸಭೆಯಲ್ಲಿ ಸೇರಿದ್ದ ಸುಮಾರು 10ಸಾವಿರಕ್ಕೂ ಹೆಚ್ಚು ಮಂದಿ ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸದರು.
ಅಘನಾಶಿನಿ ನದಿಯನ್ನ ತಿರುವು(Aghanashini River Turned) ಮಾಡಿ ಚಿತ್ರದುರ್ಗದ ವೇದಾವತಿ ನದಿಗೆ(Chitradurga Vedavati River) ಜೋಡಣೆ ಮಾಡಲು ಹೊರಟರೆ, ಬೇಡ್ತಿ ನದಿ ತಿರುವು ಮಾಡಿ ವರದಾ ನದಿಗೆ ಜೋಡಣೆ ಮಾಡಲು ಹೊರಟಿದೆ. ಇನ್ನು ಈ ಯೋಜನೆ ಜಾರಿಯಾದರೆ ಸಾವಿರಾರು ಎಕರೆ ಅರಣ್ಯ ಸಂಪತ್ತಿಗೆ ಹಾನಿಯಾಗುವುದರ ಜೊತೆಗೆ ಕೃಷಿಗೆ ದೊಡ್ಡ ಹಾನಿಯಾಗಲಿದ್ದು ಹಲವರು ನಿರಾಶ್ರಿತರಾಗಲಿರುವ ಹಿನ್ನಲೆಯಲ್ಲಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ.
ಸಮಾವೇಶ ಉದ್ದೇಶಿಸಿ ಮಾತನಾಡಿದ, ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ , ಈ ಯೋಜನೆಗಳು ಅತಾರ್ಕಿಕ ಹಾಗೂ ಅವೈಜ್ಞಾನಿಕವಾಗಿದೆ. ನಮ್ಮ ಜಿಲ್ಲೆಯ ನದಿಗಳು ಇಲ್ಲೆಯೇ ಹುಟ್ಟಿ ಇಲ್ಲಿಯೇ ಸಮುದ್ರ ಸೇರುವ ನದಿಗಳಾಗಿವೆ. ಇಂತಹ ಸಣ್ಣ ನದಿಗಳಿಗೆ ಈ ಯೋಜನೆ ಮಾಡುತ್ತಿರುವುದು ಅತಾರ್ಕಿಕ ಎಂದರು.
ನೀರು ಒಯ್ಯುತ್ತಿರುವ ಪ್ರದೇಶಗಳಲ್ಲಿ ಈಗಾಗಲೇ ನೀರಾವರಿ(Irrigation) ಇದೆ. ಅದನ್ನೇ ಸರಿಯಾಗಿ ಉಪಯೋಗಿಸಿಕೊಳ್ಳುವ ಯೋಜನೆ ರೂಪಿಸಿ ಎಂದು ಸಲಹೆ ನೀಡಿದ ಶ್ರೀಗಳು, ಮಲೆನಾಡು(Malnadu) ಹಾಗೂ ಬಯಲುಸೀಮೆಯ ಮಣ್ಣಿನ ಗುಣಗಳೇ ಬೇರೆಯಾಗಿವೆ. ಈ ಯೋಜನೆಗಳಿಂದ ಯಾರಿಗೂ ಪ್ರಯೋಜನವಿಲ್ಲ. ಆದ್ದರಿಂದ ನೀವೂ ಕೂಡ ನಮ್ಮ ಜೊತೆಗೆ ಬನ್ನಿ ಎಂದು ಬಯಲುಸೀಮೆಯ ಜನರಿಗೆ ಕರೆ ಕೊಟ್ಟರು.
ಸಮಾವೇಶದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಈ ಯೋಜನೆ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಬಜೆಟ್ ನಲ್ಲಿ ಮಂಡನೆ ಮಾಡಿದ್ದು ಆಗ ಈಗಿನ ಸಂಸದರು ಕಾಗೇರಿ ಅವರು ಸ್ಪೀಕರ್ ಆಗಿದ್ದರು ವಿರೋಧಿಸಿಲ್ಲ ಆರೋಪಿಸಿದರು.
ಸಭೆಯಲ್ಲಿ ನೆಲೆಮಾವು ಮಠದ ಸ್ವಾಮಿಜಿ, ಜೈನ ಮಠದ ಸ್ವಾಮಿಜಿ ಭಾಗವಹಿಸಿದ್ದರು. ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಎಂಎಲ್ಸಿ ಶಾಮನತರಾಮ ಸಿದ್ದಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
ಇದನ್ನು ಓದಿ : ಕೊಟ್ಟಿಗೆಯಲ್ಲಿದ್ದ ಎಂಟು ಹಸುಗಳ ಕದ್ದು ಪರಾರಿಯಾದ ಗೋಗಳ್ಳರು
ಶಾಲೆಯಿಂದ ಮನೆಗೆ ಮರಳದೇ ರೈಲು ಹತ್ತಿದ ಬಾಲಕರು. ಗೋವಾದಲ್ಲಿ ಸುರಕ್ಷಿತವಾಗಿ ಪತ್ತೆ ಮಾಡಿದ ರೈಲ್ವೆ ಪೊಲೀಸರು.
ಕುಮಟಾ ಪೊಲೀಸ್ ಸಿಬ್ಬಂದಿಗೆ ‘ಕರ್ನಾಟಕ ಸೇವಾ ರತ್ನ’ ಪ್ರಶಸ್ತಿಯ ಗರಿ*