ಕಾರವಾರ : ಗೋವಾ(GOA) ಮತ್ತು ಕಾರವಾರ(KARWAR) ಸಂಪರ್ಕಿಸುವ ಕಾಳಿ ಸೇತುವೆ ರಾತ್ರಿ 1-50 ರ ಸುಮಾರಿಗೆ ಕುಸಿದು ಬಿದ್ದಿದೆ (COLLAPSE).
ಘಟನೆಯಲ್ಲಿ ವಾಹನವೊಂದು ಸಿಲುಕಿದ್ದು ಗಾಯಗೊಂಡ ಓರ್ವನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳ ಮೂಲದ ಲಾರಿ ಚಾಲಕ ರಾಧಾಕೃಷ್ಣ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66(NATIONAL HIGHWAY 66) ರಲ್ಲಿರುವ ಈ ಮಾರ್ಗ ಗೋವಾದಿಂದ ಕರ್ನಾಟಕ (GOA-KARNATAKA) ಸಂಪರ್ಕಿಸುವೆ ಸೇತುವೆಯಾಗಿತ್ತು. 1986ರಲ್ಲಿ ಈ ಸೇತುವೆ ನಿರ್ಮಾಣಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಮಾಡಲಾಗಿತ್ತು. ಪ್ರವಾಸಿಗರ ಪಾಲಿಗೆ ಈ ಸೇತುವೆ ಆಕರ್ಷಣೆಯ ಸ್ಥಳವು ಕೂಡ ಆಗಿತ್ತು. ಅನೇಕ ಸಿನೆಮಾದ ಚಿತ್ರೀಕರಣವು ಈ ಸೇತುವೆ ಮೇಲೆ ನಡೆದಿತ್ತು.
ಚತುಷ್ಪತ ಹೆದ್ದಾರಿ ನಿರ್ಮಾಣ ಮಾಡುವಾಗ ಸಂಬಂಧಪಟ್ಟ ಐ ಆರ್ ಬಿ(IRB) ಕಂಪನಿ ಈ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಸೇತುವೆ ಮಾಡಿದ್ದರಿಂದ ಏಕ ಮುಖ ಸಂಚಾರ ನಡೆಯುತ್ತಿತ್ತು. ಇದೀಗ ಹಳೆಯ ಸೇತುವೆ ಕುಸಿದು ಬಿದ್ದಿದರಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.