ಭಟ್ಕಳ : ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ (RETIRED SOLDIER)ನಿಗೆ ಹೃದಯಸ್ಪರ್ಶಿ ಸ್ವಾಗತ ಕೋರಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ನಾಗರಾಜ ವೆಂಕ್ಟಯ್ಯ ದೇವಡಿಗ (NAGARAJ VENKTAYYA DEVADIG) ಅವರಿಗೆ ಭಟ್ಕಳದ ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಶಂಶುದ್ದಿನ್ ಸರ್ಕಲ್ (SAMSHUDDIN CIRCLE) ನಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ಕಾರಿನ ಮೂಲಕ ಭಟ್ಕಳ ಶಂಸುದ್ದಿನ್ ಸರ್ಕಲ್ ಗೆ ಆಗಮಿಸಿದ ಯೋಧನನ್ನು ಹೂವಿನ ಹಾರ ಹಾಕಿ ಗುಲಾಬಿ ಹೂ ನೀಡುವ ಮೂಲಕ ವಿವಿಧ ಸಂಘ ಸಂಸ್ಥೆ, ಬಿಜೆಪಿ ಮಂಡಲ ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ನಿವೃತ್ತ ಯೋಧ ನಾಗರಾಜ ವೆಂಕ್ಟಯ್ಯ ದೇವಾಡಿಗ, ಮಾಜಿ ಸೈನಿಕನನ್ನು ಈ ರೀತಿಯಾಗಿ ಸ್ವಾಗತ ಕೋರಿರುವುದು ತುಂಬಾ ಸಂತೋಷ ತಂದಿದೆ. ಇಂತಹ ಸ್ವಾಗತ ಮುಂದಿನ ಯುವ ಪೀಳಿಗೆ ದೇಶ ಸೇವೆ ಮಾಡಲು ಹುರಿದುಂಬಿಸುವಂತಾಗುತ್ತದೆ ಎಂದರು. ನನಗೆ ಸ್ವಾಗತ ಕೋರಿದ ಎಲ್ಲಾ ಸಮಾಜದ ಮುಖಂಡರಿಗೆ ಹಾಗೂ ಭಟ್ಕಳದ ಜನತೆಗೆ ಅವರು ಧನ್ಯವಾದ ಸಲ್ಲಿಸಿದರು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ (SHRIKANT NAIK) ಮಾತನಾಡಿ, ನಾಗರಾಜ ವೆಂಕ್ಟಯ್ಯ ದೇವಡಿಗ 2008 ರಲ್ಲಿ ಜುಲೈ ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿ ಮೊದಲು ಬೇಸಿಕ್ ತರಬೇತಿಯನ್ನು ಓಡಿಸಾದ ಚಿಲ್ಕಾದಲ್ಲಿ ಮುಗಿಸಿದರು. ನಂತರ ವೃತಿ ಪರ ತರಬೇತಿಯನ್ನು ಕೊಚ್ಚಿಯಲ್ಲಿ ಮಾಡಿ ದೇಶದ (NATION) ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐಎನ್ಎಸ್ (INS)ನಲ್ಲಿ ಅವರ ಹೆಚ್ಚಿನ ಸಮಯವನ್ನು ಕಳೆದು ಅದರೊಂದಿಗೆ ವಿವಿಧ ದೇಶದಲ್ಲಿ ಯುದ್ಧದ ತರಬೇತಿಯನ್ನು ದೇಶಕ್ಕಾಗಿ ದುಡಿದಿದ್ದಾರೆ. ಅದೇ ರೀತಿ ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಯವ್ವನದ 15 ವರ್ಷವನ್ನು ಮುಡಿಪಾಗಿಟ್ಟು ಇಂದು ಅವರು ತಮ್ಮ ನಿವೃತ್ತಿಯನ್ನು ಪಡೆದು ತವರಿಗೆ ಬಂದಿರುವುದು ನಮಗೆ ಹೆಮ್ಮೆಯಾಗಿದೆ ಎಂದರು.
ವಿವಿಧ ಸಮಾಜದ ಮುಖಂಡರು ಬಿಜೆಪಿ(BJP) ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಹಿರಿಯ ಮಾಜಿ ನಿವೃತ್ತ ಸೈನಿಕ ಎಂ.ಡಿ ಪಕ್ಕಿ ಹಾಗೂ ದೇವಾಡಿಗ ಸಮಾಜದ ಅಧ್ಯಕ್ಷ ಲಕ್ಷ್ಮಣ ಕೋಟದಮಕ್ಕಿ ನಿವೃತ್ತ ಸೈನಿಕರನ್ನುದ್ದೇಶಿಸಿ ಮಾತನಾಡಿದರು.
ಹೆಬಳೆ (HEBLE) ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ನಿವೃತ್ತ ಯೋಧರನ್ನು ಭಟ್ಕಳ ಶಂಶುದ್ದಿನ್ ಸರ್ಕಲ್ ನಿಂದ ತೆರೆದ ಜೀಪ್ ನಲ್ಲಿ ಬೈಕ್ ಮೆರವಣಿಗೆ (BIKE PROCESSION) ಮೂಲಕ ಹೆಬಳೆ ಗ್ರಾಮಕ್ಕೆ ಕರೆದೊಯ್ದರು.